ಮುಂಬೈ:ಕಳೆದ ವಾರಾಂತ್ಯದಲ್ಲಿ ಇಳಿಕೆಯತ್ತ ಮುಖ ಮಾಡಿದ್ದ ಷೇರುಪೇಟೆ, ಇಂದು ಆರಂಭದಲ್ಲೇ ಏರಿಕೆ ದಾಖಲಿಸಿದೆ. ಈ ನಡುವೆ ಷೇರು ಪೇಟೆ ಐತಿಹಾಸಿಕ ದಾಖಲೆಯನ್ನೂ ಬರೆದಿದೆ. 44 ಸಾವಿರ ಅಂಕಗಳಿಗೆ ತಲುಪುವ ಮೂಲಕ ಈ ಸಾಧನೆ ಮಾಡಿದೆ.
44 ಸಾವಿರಕ್ಕೆ ತಲುಪಿದ ಸೆನ್ಸೆಕ್ಸ್: ಪೇಟೆಯಲ್ಲಿ ಮೂಡಿದ ಮಂದಹಾಸ - ಷೇರುಪೇಟೆ
ದಿನದ ಆರಂಭಿಕ ವ್ಯವಹಾರದಲ್ಲಿ ಮುಂಬೈ ಷೇರುಪೇಟೆ 315 ಅಂಕಗಳ ಏರಿಕೆಯೊಂದಿಗೆ 43,953 ಅಂಕಗಳತ್ತ ದಾಪುಗಾಲಿಟ್ಟಿದೆ. ಇನ್ನು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ಸಹ 88 ಅಂಕ ಏರಿಕೆ ಕಾಣುವ ಮೂಲಕ 12,869 ಕ್ಕೇ ತಲುಪಿದೆ.
315 ಆರಂಭಿಕ ಏರಿಕೆ ದಾಖಲಿಸಿದ ಷೇರುಪೇಟೆ
ದಿನದ ಆರಂಭಿಕ ವ್ಯವಹಾರದಲ್ಲಿ( ಬೆಳಗ್ಗೆ 9:30 ರ ಸುಮಾರಿಗೆ) ಮುಂಬೈ ಷೇರುಪೇಟೆ 315 ಅಂಕಗಳ ಏರಿಕೆಯೊಂದಿಗೆ 43,953 ಅಂಕಗಳತ್ತ ದಾಪುಗಾಲಿಟ್ಟಿದೆ. ಇನ್ನು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ಸಹ 88 ಅಂಕ ಏರಿಕೆ ಕಾಣುವ ಮೂಲಕ 12,869ಕ್ಕೆ ತಲುಪಿತ್ತು. ಈ ಅಂಕಗಳನ್ನು ದಾಟಿ 44, 161ಕ್ಕೆ ಹೆಚ್ಚಳ ಕಂಡು ದಾಖಲೆ ಬರೆದಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಬಂದ ಸಕಾರಾತ್ಮಕ ಬೆಳವಣಿಗೆ ಹಾಗೂ ಅಮೆರಿಕ ಫಾರ್ಮಾ ಕಂಡು ಹಿಡಿದ ಕೋವಿಡ್ ವಾಕ್ಸಿನ್ ಹಾಗೂ ಅದು ಶೇ 94.5 ರಷ್ಟು ಯಶಸ್ಸು ಗಳಿಸಿರುವುದು ಷೇರುಪೇಟೆ ಭಾರಿ ಏರಿಕೆ ದಾಖಲಿಸಲು ಕಾರಣ ಎಂದು ಹೇಳಲಾಗಿದೆ.
Last Updated : Nov 17, 2020, 11:07 AM IST