ಮುಂಬೈ: ಜಾಗತಿಕ ಷೇರುಪೇಟೆಯಲ್ಲಿ ಕರಡಿ ಕುಣಿತ ಮುಂದುವರಿದಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 200 ಅಂಕಗಳು ಕುಸಿತ ಕಂಡಿದ್ದು, ಶೇಕಡಾ 52,351.79 ಕ್ಕೆ ವಹಿವಾಟು ನಡೆಸುತ್ತಿದೆ. ಎನ್ಎಸ್ಇ ನಿಫ್ಟಿಯಲ್ಲಿ 58.45 ಪಾಯಿಂಟ್ ಕುಸಿದಿದ್ದು, 15,693.95 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಪ್ಯಾಕ್ನಲ್ಲಿ ಎಚ್ಸಿಎಲ್ ಟೆಕ್ ಅಗ್ರಸ್ಥಾನದಲ್ಲಿದೆ. ಎಚ್ಡಿಎಫ್ಸಿ ಬ್ಯಾಂಕ್, ಭಾರ್ತಿ ಏರ್ಟೆಲ್, ಎಂ ಅಂಡ್ ಎಂ, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಅಲ್ಟ್ರಾಟೆಕ್ ಸಿಮೆಂಟ್, ಏಷಿಯನ್ ಪೇಂಟ್ಸ್, ಪವರ್ ಗ್ರಿಡ್ ಮತ್ತು ನೆಸ್ಲೆ ಇಂಡಿಯಾ ಕೂಡ ಲಾಭದಲ್ಲಿವೆ.
ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 586.66 ಪಾಯಿಂಟ್ ಕುಸಿದು 52,553.40 ಕ್ಕೆ ತಲುಪಿತ್ತು. ನಿಫ್ಟಿ 171 ಪಾಯಿಂಟ್ ಕುಸಿತ ಕಂಡಿದ್ದು 15,752.40 ಅಂಕಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.
ತಾತ್ಕಾಲಿಕ ವಿನಿಮಯ ದತ್ತಾಂಶದ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐಗಳು) ಸೋಮವಾರ 2,198.71 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದಾರೆ.