ಚೆನ್ನೈ:ತಮಿಳುನಾಡಿನ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ವೆಲ್ಲೂರಿನಲ್ಲಿ ವಶ ಪಡಿಸಿಕೊಂಡ ಅಧಿಕಾರಿಗಳಿಗೆ ಮತ್ತೊಂದು ಸ್ಪೋಟಕ ಮಾಹಿತಿ ದೊರೆತಿದೆ.
ಗುಪ್ತಚರ ಏಜೆನ್ಸಿ ಅಂದಾಜಿನ ಪ್ರಕಾರ ವಿವಿಧ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಸುಮಾರು ₹ 10,000 ಕೋಟಿ ಹಣ ಖರ್ಚು ಮಾಡಲಿವೆ ಎಂಬುದು ಬಹಿರಂಗವಾಗಿದೆ.
ಸಿಮೆಂಟ್ ಗೋಡೌನ್ನಲ್ಲಿ ಪತ್ತೆಯಾಗಿರುವ 9 ಕೋಟಿಗಿಂತಲೂ ಅಧಿಕ ಹಣ ಡಿಎಂಕೆ ಪಕ್ಷದ ಖಜಾಂಚಿ ಎಸ್. ದೊರೈ ಮುರುಗನ್ ಅವರಿಗೆ ಸೇರಿದ್ದರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ.
ತಮಿಳುನಾಡು ಮತ್ತು ಪುದುಚರಿ ಸೇರಿ 40 ಸಂಸತ್ ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಮತದಾನ ನಡೆಯಲಿದೆ. ದೇಶಾದ್ಯಂತ 70 ಅತಿ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿದೆ. ತಮಿಳುನಾಡಿನಲ್ಲೇ ಇದುವರೆಗೂ ₹ 78.12 ಕೋಟಿ ನಗದ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.