ನವದೆಹಲಿ:ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿನ ಸಂಸ್ಥೆಗಳು, ಪ್ರಮುಖ ಕೈಗಾರಿಕೆಗಳು ಹಾಗೂ ಎಂಎಸ್ಎಂಇಗಳಿಗೆ ನೀಡಬೇಕಿರುವ ಬಾಕಿ ಪಾವತಿಯನ್ನು ಮರುಪಾವತಿಸಲು ಸರ್ಕಾರ 1 ಲಕ್ಷ ಕೋಟಿ ರೂ. ನಿಧಿಸ್ಥಾಪಿಸಲು ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಾವು 1 ಲಕ್ಷ ಕೋಟಿ ರೂ. ನಿಧಿ ಸ್ಥಾಪಿಸಲು ನಿರ್ಧರಿಸಿದ್ದೇವೆ. ಈ ನಿಧಿಯನ್ನು ಸರ್ಕಾರ ಪ್ರೀಮಿಯಂ ಪಾವತಿಯ ವಿಮೆಯಾಗಿ ಮಾಡುತ್ತದೆ. ಪಾವತಿ ಮತ್ತು ಸ್ವೀಕರಿಸುವ ಘಟಕದ ನಡುವಿನ ಬಡ್ಡಿ ಹೊರೆ ಹಂಚಿಕೊಳ್ಳಲು ಸೂತ್ರಯೊಂದನ್ನು ತರುತ್ತೇವೆ. ಈ ನಿಧಿಯ ಬ್ಯಾಂಕ್, ಪಿಎಸ್ಯು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಪ್ರಮುಖ ಕೈಗಾರಿಕೆಗಳೊಂದಿಗೆ ಸಿಲುಕಿರುವ ಎಂಎಸ್ಎಂಇಗಳ ಪಾವತಿಗಾಗಿ ಇರಲಿದೆ ಎಂದರು.