ಕರ್ನಾಟಕ

karnataka

ETV Bharat / business

ಪೀಪಲ್ಸ್ ಕೋ-ಆಪರೇಟಿವ್ ಬ್ಯಾಂಕ್‌ ವ್ಯವಹಾರದ ಮೇಲೆ ಆರ್​ಬಿಐ ನಿರ್ಬಂಧ! - ಪೀಪಲ್ಸ್ ಕೋ ಆಪರೇಟಿವ್ ಬ್ಯಾಂಕ್

ಯಾವುದೇ ಸಾಲ ಮತ್ತು ಮುಂಗಡಗಳನ್ನು ಲಿಖಿತವಾಗಿ ನೀಡಬಾರದು. ಹೂಡಿಕೆ ಮಾಡುವುದು, ಹೊಸ ಠೇವಣಿಗಳನ್ನು ಸ್ವೀಕರಿಸುವುದು ಸೇರಿ ಯಾವುದೇ ಹೊಣೆಗಾರಿಕೆಯನ್ನು ಬ್ಯಾಂಕ್ ಮಾಡಬಾರದು ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

RBI
ಆರ್​ಬಿಐ

By

Published : Jun 12, 2020, 7:05 PM IST

ಮುಂಬೈ :ಕಾನ್ಪುರ ಮೂಲದ ಪೀಪಲ್ಸ್ ಕೋ-ಆಪರೇಟಿವ್ ಬ್ಯಾಂಕ್​ಗೆ ಹೊಸ ಆರ್ಥಿಕ ಸಾಲ ನೀಡುವುದು ಮತ್ತು ಆರು ತಿಂಗಳವರೆಗೆ ಠೇವಣಿ ಸ್ವೀಕರಿಸುವುದಕ್ಕೆ ಆರ್​ಬಿಐ ನಿರ್ಬಂಧ ಹೇರಿದೆ.

ಅಲ್ಲದೆ ಸಹಕಾರಿ ಬ್ಯಾಂಕಿನಿಂದ ಠೇವಣಿದಾರರು ಹಣವನ್ನು ಹಿಂಪಡೆಯಲು ಅನುಮತಿ ಇಲ್ಲ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಹೇಳಿದೆ. ಜೂನ್‌ 10, 2020ರಂದು ವ್ಯವಹಾರವು ಮುಕ್ತಾಯಗೊಂಡಂತೆ, ಆರ್​ಬಿಐನ ಪೂರ್ವಾನುಮತಿ ಇಲ್ಲದೆ, ಯಾವುದೇ ಸಾಲ ಮತ್ತು ಮುಂಗಡಗಳನ್ನು ಲಿಖಿತವಾಗಿ ನೀಡಬಾರದು. ಹೂಡಿಕೆ ಮಾಡುವುದು, ಹೊಸ ಠೇವಣಿಗಳನ್ನು ಸ್ವೀಕರಿಸುವುದು ಸೇರಿ ಯಾವುದೇ ಹೊಣೆಗಾರಿಕೆಯನ್ನು ಬ್ಯಾಂಕ್ ಮಾಡಬಾರದು ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದಲ್ಲದೆ ಸಹಕಾರಿ ಬ್ಯಾಂಕ್ ತನ್ನ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ಮಾರಾಟ ಮಾಡುವುದು, ವರ್ಗಾಯಿಸುವುದು ಅಥವಾ ವಿಲೇವಾರಿ ಮಾಡುವುದಕ್ಕೂ ಭಾರತೀಯ ರಿಸರ್ವ್‌ ಬ್ಯಾಂಕ್ ನಿರ್ಬಂಧಿಸಿದೆ.

ABOUT THE AUTHOR

...view details