ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ನ ನಿಧಿ ಹಂಚಿಕೆ ಸಂಬಂಧ ರಚಿಸಲಾದ ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲನ್ ಸಮಿತಿ ಕೇಂದ್ರೀಯ ಬ್ಯಾಂಕ್ನ ಬ್ಯಾಲೆನ್ಸ್ ಶೀಟ್ ಬಲವಾಗಿರಬೇಕು ಎಂದು ಎಚ್ಚರಿಸಿದೆ.
ಆರ್‌ಬಿಐ ಬ್ಯಾಲೆನ್ಸ್ ಶೀಟ್ ಸದೃಢವಾಗಿರಲಿ: ಕೇಂದ್ರಕ್ಕೆ ಜಲನ್ ಸಮಿತಿ ಎಚ್ಚರಿಕೆ
ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್ಗಳಿಗೆ ಮರು ಬಂಡವಾಳ ಹೂಡಬೇಕಾದ ಅಗತ್ಯವಿದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬ್ಯಾಲೆನ್ಸ್ ಶೀಟ್ ಬಲವಾಗಿರಬೇಕು ಎಂದು ಕೇಂದ್ರ ಬ್ಯಾಂಕಿನ ಆರ್ಥಿಕ ಬಂಡವಾಳ ಚೌಕಟ್ಟು (ಇಸಿಎಫ್) ಪರಿಶೀಲನೆಯ ಜಲನ್ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್ಗಳಿಗೆ ಮರು ಬಂಡವಾಳ ಹೂಡಬೇಕಾದ ಅಗತ್ಯವಿದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬ್ಯಾಲೆನ್ಸ್ ಶೀಟ್ ಬಲವಾಗಿರಬೇಕು ಎಂದು ಕೇಂದ್ರ ಬ್ಯಾಂಕಿನ ಆರ್ಥಿಕ ಬಂಡವಾಳ ಚೌಕಟ್ಟು (ಇಸಿಎಫ್) ಪರಿಶೀಲನೆಯ ಜಲನ್ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಭಾರತವು ಅತ್ಯಂತ ಕಡಿಮೆ ರೇಟಿಂಗ್ ಹೊಂದಿದೆ ಮತ್ತು ಉತ್ತೇಜನ ತುಂಬವಷ್ಟು ಮೀಸಲು ಕರೆನ್ಸಿ ಸಹ ಹೊಂದಿಲ್ಲ. ಸರ್ಕಾರದ ಅಪಾಯಕಾರಿ ಕ್ರಮಗಳು ಮುಂದುವರಿದರೆ ಆರ್ಥಿಕತೆಗಳು ಇನ್ನೂ ಸುರಕ್ಷಿತವಾಗಿರುತ್ತದೆ ಎಂದು ಭಾವಿಸಬಾರದು ಎಂದು ಮಾಜಿ ಆರ್‌ಬಿಐ ಗವರ್ನರ್ ಬಿಮಲ್ ನೇತೃತ್ವದ ಸಮಿತಿ ಕಿವಿಮಾತು ಹೇಳಿದೆ.