ಕರ್ನಾಟಕ

karnataka

ಪೆಟ್ರೋಲ್ ಸೆಂಚುರಿ: ಮಿತಿಮೀರಿದ ಲೂಟಿ - ಕೇಂದ್ರದ ವಿರುದ್ಧ ಕೈ ಟೀಕಾಸ್ತ್ರ!

By

Published : Jun 7, 2021, 1:26 PM IST

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಪೆಟ್ರೋಲ್ ಬೆಲೆ ಏರಿಕೆಯನ್ನು "ಅತಿಯಾದ ಸಾರ್ವಜನಿಕ ಲೂಟಿ" ಎಂದು ಬಣ್ಣಿಸಿದ್ದಾರೆ ಮತ್ತು ಇದಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಹೇಳಿದರು.

Rahul Gandhi
Rahul Gandhi

ನವದೆಹಲಿ: ಪೆಟ್ರೋಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಕೇಂದ್ರ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಂತರ ತೆರಿಗೆ ಸಂಗ್ರಹ ಏರಿಕೆಯ ನಡುವೆಯೂ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ದೆಹಲಿಯಲ್ಲಿಯೂ ಶತಕದ ಸನಿಹದಲ್ಲಿ ಇರುವಾಗಲೇ ಅವರ ಹೇಳಿಕೆಗಳು ಹೊರ ಬಂದಿವೆ.

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಪೆಟ್ರೋಲ್ ಬೆಲೆ ಏರಿಕೆಯನ್ನು "ಅತಿಯಾದ ಸಾರ್ವಜನಿಕ ಲೂಟಿ" ಎಂದು ಬಣ್ಣಿಸಿದ್ದಾರೆ ಮತ್ತು ಇದಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಹೇಳಿದರು.

ಇದನ್ನೂ ಓದಿ: ಶತಕ ದಾಟಿದರೂ ನಿಲ್ಲದ ಪೆಟ್ರೋಲ್-ಡೀಸೆಲ್​ ದರ: ಇಂದು ಮತ್ತೆ ಬೆಲೆ ಏರಿಕೆ ಬರೆ

ಅತಿಯಾದ ಸಾರ್ವಜನಿಕ ಲೂಟಿಯನ್ನು ಕಳೆದ 13 ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ನಿಂದ ಮಾಡಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್​ಗೆ 100 ರೂ. ದಾಟಿದೆ. ಮೋದಿ ಸರ್ಕಾರವು ತೆರಿಗೆ ಹೆಚ್ಚಳ ಮತ್ತು ಹೆಚ್ಚಿನ ಕಚ್ಚಾ ತೈಲ ಬೆಲೆ ಅಲ್ಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಗೆ ಕಾರಣವಾಗಿದೆ ಎಂದು ಅವರು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗಾಗಿ ಕಾಂಗ್ರೆಸ್ ಸರ್ಕಾರ ಟೀಕಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸುತ್ತಿದೆ.

ABOUT THE AUTHOR

...view details