ಕರ್ನಾಟಕ

karnataka

ETV Bharat / business

2 ತಿಂಗಳಲ್ಲಿ ಬ್ಯಾಂಕ್​ಗಳಿಂದ 6 ಲಕ್ಷ ಕೋಟಿ ರೂ. ಸಾಲ ಮಂಜೂರು: ನಿರ್ಮಲಾ ಸೀತಾರಾಮನ್ - ವಾಣಿಜ್ಯ ಸುದ್ದಿ

ಮಾರ್ಚ್ 1 ರಿಂದ ಮೇ 8ರ ನಡುವಿನ ಅವಧಿಯಲ್ಲಿ ಈ ಬ್ಯಾಂಕ್​ಗಳಿಂದ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) 1.18 ಲಕ್ಷ ಕೋಟಿ ರೂ.ಯಷ್ಟು ಸಾಲ ಸ್ವೀಕರಿಸಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.

Nirmala Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

By

Published : May 12, 2020, 5:04 PM IST

ನವದೆಹಲಿ:ಸಾರ್ವಜನಿಕ ವಲಯದ ಬ್ಯಾಂಕ್​ಗಳು (ಪಿಎಸ್‌ಬಿ) ಎಂಎಸ್‌ಎಂಇ, ಕೃಷಿ ಮತ್ತು ಕಾರ್ಪೊರೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಳೆದ ಎರಡು ತಿಂಗಳಲ್ಲಿ 5.95 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಿವೆ.

2020ರ ಮಾರ್ಚ್ 1 ರಿಂದ ಮೇ 1ರವರೆಗೆ ಎಂಎಸ್‌ಎಂಇ, ಚಿಲ್ಲರೆ ವ್ಯಾಪಾರ, ಕೃಷಿ ಮತ್ತು ಕಾರ್ಪೊರೇಟ್ ವಲಯಗಳಿಂದ 46.74 ಲಕ್ಷಕ್ಕೂ ಹೆಚ್ಚು ಖಾತೆಗಳಿಗೆ ಪಿಎಸ್‌ಬಿಗಳು 5.95 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಿವೆ. ಒಟ್ಟು 1.18 ಲಕ್ಷ ಕೋಟಿ ರೂ. ಹಣವನ್ನು ಎನ್‌ಬಿಎಫ್‌ಸಿಗಳಿಗೆ ಒದಗಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಾರ್ಚ್ 25ರಿಂದ ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಕಾರ್ಯನಿರತ ಬಂಡವಾಳದ ಮಿತಿಗಳ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ನಿಧಿಯ ಶೇ 10ರಷ್ಟು ಹೆಚ್ಚುವರಿ ಸಾಲ ನೀಡಿವೆ.

ಮಾರ್ಚ್ 20ರಿಂದ ಮೇ 8ರವರೆಗೆ ಸಾರ್ವಜನಿಕ ವಲಯದ ಬ್ಯಾಂಕ್​ಗಳು ತುರ್ತು ಸಾಲ ಮತ್ತು ಕಾರ್ಯನಿರತ ಬಂಡವಾಳದಡಿ 65,879 ಕೋಟಿ ರೂ. ಮಂಜೂರಾದ ಸಾಲಗಳಿಗೆ ಅರ್ಹರಾದ ಶೇ 97ರಷ್ಟು ಸಾಲಗಾರರನ್ನು ಸಂಪರ್ಕಿಸಿವೆ. ಇದು ಮೇ 4ರವರೆಗೆ ಮಂಜೂರಾದ 26,500 ಕೋಟಿ ರೂ.ಗಳಿಂದ ಹೆಚ್ಚಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.

ABOUT THE AUTHOR

...view details