ನವದೆಹಲಿ :ಪ್ರಸ್ತುತ ಉದ್ಯೋಗ ಮಾರುಕಟ್ಟೆ ಮತ್ತು ಆರ್ಥಿಕ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಗಳ ಹೊರತಾಗಿಯೂ ಭಾರತದಲ್ಲಿನ ವೃತ್ತಿಪರರು ತಮ್ಮ ವೃತ್ತಿಜೀವನದ ಪ್ರಗತಿಯ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಇತ್ತೀಚಿನ ಲಿಂಕ್ಡ್‌ಇನ್ ವರ್ಕ್‌ಫೋರ್ಸ್ ಕಾನ್ಫಿಡೆನ್ಸ್ ಇಂಡೆಕ್ಸ್ ಪ್ರಕಾರ, ಭಾರತದ ಒಟ್ಟಾರೆ ವಿಶ್ವಾಸದಲ್ಲಿ ಕುಸಿತ ಕಂಡು ಬಂದಿದೆ. ಯಾಕೆಂದರೆ, ಸಂಯೋಜಿತ ಸ್ಕೋರ್ 2020 ಡಿಸೆಂಬರ್‌ನಲ್ಲಿದ್ದ 58 ಅಂಕಗಳಿಂದ 2021ರ ಜನವರಿಯಲ್ಲಿ 54ಕ್ಕೆ ಇಳಿದಿದೆ.
ಸಾಂಕ್ರಾಮಿಕ ರೋಗದ ವಸ್ತುಸ್ಥಿತಿ, ಖರ್ಚುಗಳ ಹೆಚ್ಚಳ ಮತ್ತು ಪ್ರಸ್ತುತ ಆರ್ಥಿಕ ವಾತಾವರಣದಲ್ಲಿ ಉದ್ಯೋಗದ ಲಭ್ಯತೆಯ ಬಗ್ಗೆ ಉದ್ಯೋಗಿಗಳ ಹೆಚ್ಚುತ್ತಿರುವ ಆತಂಕಗಳಿಗೆ ಈ ಆಶಾವಾದದ ಕುಸಿತವು ಸಮೀಕ್ಷೆಯ ಕಾರಣವಾಗಿದೆ.
ಲಿಂಕ್ಡ್‌ಇನ್‌ನ ಲೇಬರ್ ಮಾರ್ಕೆಟ್ ಅಪ್‌ಡೇಟ್‌ನ ಇತ್ತೀಚಿನ ಆವೃತ್ತಿಯ ಪ್ರಕಾರ, 2020ರ ಡಿಸೆಂಬರ್‌ನಲ್ಲಿ ಭಾರತದ ನೇಮಕಾತಿ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ.17ಕ್ಕೆ ಇಳಿದಿದೆ.
ಇದನ್ನೂ ಓದಿ: 'ಏರ್ಟೆಲ್ ಆ್ಯಡ್ಸ್'.. ಜಾಹೀರಾತು ಮಾರುಕಟ್ಟೆಗೆ ಭಾರ್ತಿ ಏರ್ಟೆಲ್ ಲಗ್ಗೆ
1,752 ವೃತ್ತಿಪರರ ಪ್ರತಿಕ್ರಿಯೆಗಳ ಆಧಾರದ ಮೇಲೆ ಜನವರಿ 1-29ರ ಸಮೀಕ್ಷೆಯ ಆವಿಷ್ಕಾರಗಳು, ಹೆಚ್ಚುತ್ತಿರುವ ಅನಿಶ್ಚಿತತೆಗಳ ಹೊರತಾಗಿಯೂ 80 ಪ್ರತಿಶತ ವೃತ್ತಿಪರರು ಸ್ಕಿಲ್ಲಿಂಗ್ ಅವಕಾಶಗಳ ಬಗ್ಗೆ ವಿಶ್ವಾಸ ಹೊಂದಿದ್ದರೆ, 79 ಪ್ರತಿಶತದಷ್ಟು ಜನರು ತಮ್ಮ ಸಿವಿ ಬಲದ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಪೊರೇಟ್ ಸೇವೆಗಳು, ಆರೋಗ್ಯ ರಕ್ಷಣೆ, ಸಾಫ್ಟ್‌ವೇರ್ ಮತ್ತು ಐಟಿ ಕೈಗಾರಿಕೆಗಳಂತಹ ಸಾಂಪ್ರದಾಯಿಕ ಕ್ಷೇತ್ರಗಳ ಉದ್ಯೋಗಿಗಳು ತಮ್ಮ ಉದ್ಯೋಗದಾತರ ಭವಿಷ್ಯದ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ಯಾಕೆಂದರೆ, ಕಂಪನಿಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಲೇ ಇರುತ್ತವೆ.