ಒಸಾಕ: ಜಪಾನ್ನ ಒಸಾಕದಲ್ಲಿ ನಡೆದ ಜಿ-20 ಶೃಂಗಸಭೆಗೆ ತೆರೆ ಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ.
ಈ ನಡುವೆ, ಜಿ-20 ಶೃಂಗಸಭೆಯ ಮೂರನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಹು ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಯೋಜನೆ ಹಾಗೂ ಭಾರತೀಯ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಾದ ಯೋಗ, ಯುನಾನಿಗಳ ಬಗ್ಗೆ ಚರ್ಚೆಗೆ ಬಂತು. ವಿಶ್ವದ ಜನರ ಆರೋಗ್ಯ ಕಾಪಾಡುವ ಕುರಿತಂತೆ ಹೆಚ್ಚಿನ ಒತ್ತು ನೀಡಲಾಯಿತು.