ನವದೆಹಲಿ:ಮಧ್ಯಂತರ ಬಜೆಟ್ನಲ್ಲಿ ಘೋಷಣೆ ಮಾಡಲಾದ ಪ್ರಧಾನ ಮತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕ ₹ 6,000 ಆರ್ಥಿಕ ನೆರವು ನೀಡುವ 2ನೇ ಕಂತನ್ನು ಕೇಂದ್ರ ಸರ್ಕಾರ ಮುಂದಿನ ತಿಂಗಳಿಂದ ವಿತರಿಸಲಿದೆ.
ನೋಂದಾಯಿತ 4.74 ಕೋಟಿ ರೈತರ ಪೈಕಿ 2.74 ಕೋಟಿ ರೈತರು ಈಗಾಗಲೇ ಮೊದಲ ಕಂತಿನ ಹಣ ಸ್ವೀಕರಿಸಿದ್ದು, ಉಳಿದವರು ಮಾರ್ಚ್ ಅಂತ್ಯದ ಒಳಗೆ ಹಣ ಸ್ವೀಕರಿಸಲಿದ್ದಾರೆ. ಎರಡನೇ ಕಂತನ್ನು ಏಪ್ರಿಲ್‌ನಲ್ಲಿ ಪಡೆಯಲಿದ್ದಾರೆ ಎಂದರು.
ಏಪ್ರಿಲ್ 1ರಿಂದಲೇ 2ನೇ ಕಂತು ವಿತರಣೆ ಚಟುವಟಿಕೆಗಳು ಆರಂಭವಾಗಲಿದೆ. ಮಾರ್ಚ್ 10ರಂದು ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇದಕ್ಕೂ ಮೊದಲೇ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಾಯಿತ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಎರಡನೇ ಕಂತಿನ ಹಣ ಜಮೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 24ರಂದು ಉತ್ತರಪ್ರದೇಶದಲ್ಲಿ ಚಾಲನೆ ನೀಡಿದರು. ಈ ವೇಳೆ 1.01 ಕೋಟಿ ರೈತರಿಗೆ ₹ 2,021 ಕೋಟಿ ವಿತರಿಸಲಾಗಿತ್ತು. ಮಧ್ಯಂತರ ಆಯವ್ಯಯದಲ್ಲಿ ₹ 75 ಸಾವಿರ ಕೋಟಿ ಕಿಸಾನ್ ಸಮ್ಮಾನ್ ಯೋಜನೆಗೆ ತೆಗೆದಿರಿಸಿತ್ತು. ಇದರಡಿ 2 ಹೆಕ್ಟೇರ್‌ವರೆಗೆ ಜಮೀನು ಹೊಂದಿದ ಸಣ್ಣ ಮತ್ತು ಮಧ್ಯವರ್ಗದ 12 ಕೋಟಿ ರೈತರಿಗೆ 3 ಕಂತುಗಳಲ್ಲಿ ವಾರ್ಷಿಕ ₹ 6,000 ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.