ಕರ್ನಾಟಕ

karnataka

ETV Bharat / business

ದಾವೊಸ್​ನ ವಿಶ್ವ ಆರ್ಥಿಕ ಶೃಂಗಸಭೆಗೆ ಭಾರತದ ಕ್ಯಾಪ್ಟನ್​ ಗೋಯಲ್​,ಸಿಎಂ ಯಡಿಯೂರಪ್ಪ ಭಾಗಿ

50ನೇ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ನಾನಾ ರಾಷ್ಟ್ರಗಳ ಉದ್ಯಮಿಗಳು, ಸರ್ಕಾರಗಳ ಪ್ರತಿನಿಧಿಗಳು, ಹೂಡಿಕೆದಾರರು, ಆರ್ಥಿಕ ತಜ್ಞರೂ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು, ಭಾರತದ ನಿಯೋಗದ ನಾಯಕತ್ವವನ್ನು ವಾಣಿಜ್ಯ ಸಚಿವ ಪಿಯೂಷ್​ ಗೋಯಲ್​ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕದ ಪ್ರತಿನಿಧಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತೆರಳಲಿದ್ದು, 40ಕ್ಕೂ ಅಧಿಕ ಉದ್ಯಮಿಗಳನ್ನು ಈ ವೇಳೆ ಭೇಟಿ ಮಾಡಲಿದ್ದಾರೆ.

Piyush Goyal
ಗೋಯಲ್​ ಬಿಎಸ್​ವೈ

By

Published : Jan 18, 2020, 7:50 PM IST

ನವದೆಹಲಿ/ ಬೆಂಗಳೂರು: ಸ್ವಿಟ್ಜರ್​ಲ್ಯಾಂಡ್​ನ ದಾವೊಸ್​ನಲ್ಲಿ ಜನವರಿ 20ರಿಂದ 24ರವರೆಗೆ ನಡೆಯಲಿರುವ ಜಾಗತಿಕ ಮಟ್ಟದ ವಿಶ್ವ ಆರ್ಥಿಕ ಶೃಂಗಸಭೆಗೆ (ಡಬ್ಲ್ಯುಇಎಫ್​) ಕೇಂದ್ರ ವಾಣಿಜ್ಯ ಸಚಿವ ಪಿಯೂಷ್​ ಗೋಯಲ್​ ಭಾರತೀಯ ನಿಯೋಗದ ಮುಂದಾಳತ್ವ ವಹಿಸಲಿದ್ದಾರೆ.

50ನೇ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ನಾನಾ ರಾಷ್ಟ್ರಗಳ ಉದ್ಯಮಿಗಳು, ಸರ್ಕಾರಗಳ ಪ್ರತಿನಿಧಿಗಳು, ಹೂಡಿಕೆದಾರರು, ಆರ್ಥಿಕ ತಜ್ಞರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಗೋಯಲ್​ ಜೊತೆಗೆ ಇತರೆ ಸಚಿವರು ತೆರಳಲಿದ್ದಾರೆ.

ಕೇಂದ್ರ ಸಚಿವ ಗೋಯಲ್​ ಅವರು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ರಷ್ಯಾ, ಸೌದಿ ಅರೇಬಿಯಾ, ಸ್ವಿಟ್ಜರ್​ಲ್ಯಾಂಡ್​, ಕೊರಿಯಾ ಮತ್ತು ಸಿಂಗಾಪುರ ಸಚಿವರುಗಳನ್ನು ಭೇಟಿ ಮಾಡಿ ವ್ಯಾಪಾರ ಸಂಬಂಧಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವಿಶ್ವ ವಾಣಿಜ್ಯ ಒಕ್ಕೂಟದ (ಡಬ್ಲ್ಯುಟಿಒ) ನಿರ್ದೇಶಕ ಮತ್ತು ಅಂತರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ) ಜನರ್​ ಸೆಕ್ರೆಟರಿ ಅವರನ್ನು ಭೇಟಿ ಮಾಡಲಿದ್ದಾರೆ.

ಗೋಯಲ್​ ವಿವಿಧ ಕಂಪನಿಗಳ ಸಿಇಒಗಳ ಜೊತೆಗೆ ಹೂಡಿಕೆ ವಿಷಯವಾಗಿ ಚರ್ಚಿಸಲಿದ್ದಾರೆ. ಡಬ್ಲ್ಯುಇಎಫ್​ನ ಸಂವಾದ ಹಾಗೂ ದುಂಡು ಮೇಜಿನ ಸಭೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಹೂಡಿಕೆ ಹಾಗೂ ಭಾರತದಲ್ಲಿ ಹೂಡಿಕೆ ಮಾಡುವಂತೆ ಜಾಗತಿಕ ಕಂಪನಿಗಳನ್ನು ಆಹ್ವಾನಿಸಲಿದ್ದಾರೆ.

ದಾವೊಸ್​ನಲ್ಲಿ ಬಿಎಸ್​ವೈ ಭಾಗಿ:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಯೋಗ ಸಹ ದಾವೊಸ್​ಗೆ ತೆರಳಲಿದ್ದು, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ 40ಕ್ಕೂ ಅಧಿಕ ಜಾಗತಿಕ ಮಟ್ಟದ ಕಂಪನಿಗಳ ಮುಖ್ಯಸ್ಥರ ಜೊತೆಗೆ ಚರ್ಚಿಸಲಿದ್ದಾರೆ. ಅವರೊಂದಿಗೆ ಸಿಎಂ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್, ಡಸಾಲ್ಟ್​ ಸಿಸ್ಟಮ್ಸ್​, ಎಚ್​ಪಿ, ಎಸ್​ಎಪಿ, ಮಿತ್ಸುಬಿಷಿ, ಜಿಇ, ನೋವಾ ನೊರ್ಡಿಸ್ಕ್​, ಡೆನ್ಸೊ ಸೇರಿದಂತೆ ಹಲವು ಕಂಪನಿಗಳ ಮುಖ್ಯಸ್ಥರೊಂದಿಗೆ ವ್ಯಾವಹಾರಿಕ ಮಾತುಕತೆ ನಡೆಯಲಿದೆ.

ABOUT THE AUTHOR

...view details