ನವದೆಹಲಿ:ಕಳೆದ ಐದು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಇದ್ದು, ಇಂದೂ ಕೂಡ ಲೀಟರ್ ಮೇಲೆ 60 ಪೈಸೆ ಏರಿಕೆಯಾಗಿದೆ.
ಲಾಕ್ಡೌನ್ ವಿರಾಮದ ಬಳಿಕ ಕಳೆದ ಭಾನುವಾರದಿಂದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಏರಿಕೆ ಮಾಡುತ್ತಾ ಬಂದಿವೆ. ಇದೀಗ ಪ್ರತಿ ಲೀಟರ್ ಪೆಟ್ರೋಲ್ಗೆ ಒಟ್ಟು 2.74 ರೂ ಹಾಗೂ ಡೀಸೆಲ್ಗೆ 2.83 ರೂ. ಹೆಚ್ಚಳವಾದಂತಾಗಿದೆ.