ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 20 ರಷ್ಟು ದರ ಕಡಿತವಾಗಲಿದೆ ಎಂಬ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಮುಂದಿನ ತಿಂಗಳಿಂದ ತೈಲ ಉತ್ಪಾದನೆಯನ್ನ ಹೆಚ್ಚಿಸಲು ಉತ್ಪಾದನಾ ರಾಷ್ಟ್ರಗಳು ನಿರ್ಧಾರ ಕೈಗೊಂಡಿರುವುದರಿಂದ ಈ ಬೆಳವಣಿಗೆ ಆಗಿದೆ ಎಂದು ಹೇಳಲಾಗುತ್ತಿದೆ.
ಸೌದಿ-ರಷ್ಯಾ ನಡುವಿನ ಕಚ್ಚಾತೈಲ ಸಮರ :
ವಿಶ್ವದ ಅತ್ಯಂತ ಬೃಹತ್ ಕಚ್ಚಾತೈಲ ಉತ್ಪಾದಕ ಹಾಗೂ ಮಾರಾಟ ರಾಷ್ಟ್ರ ಸೌದಿ ಅರೇಬಿಯಾ ಹಾಗೂ ವಿಶ್ವದ ಎರಡನೇ ಬೃಹತ್ ಕಚ್ಚಾತೈಲ ಉತ್ಪಾದಕ ರಾಷ್ಟ್ರ ರಷ್ಯಾ ನಡುವೆ ಕಚ್ಚಾತೈಲ ಬೆಲೆಯ ಪೈಪೋಟಿ ಶುರುವಾಗಿದೆ.
ರಷ್ಯಾದೊಂದಿಗೆ ಪೈಪೋಟಿಗೆ ಇಳಿದಿರುವ ಸೌದಿ ಅರೇಬಿಯಾ, ಬ್ಯಾರೆಲ್ ಕಚ್ಚಾತೈಲದ ಬೆಲೆಯಲ್ಲಿ 14.25 ಡಾಲರ್ ನಷ್ಟು ಕಡಿತ ಮಾಡಿದೆ. ಅಂದರೆ ಪ್ರಸಕ್ತ ಕಚ್ಚಾತೈಲದ ಪ್ಯೂಚರ್ ಬೆಲೆಯಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ.
ಸೌದಿ-ರಷ್ಯಾ ನಡುವಿನ ಈ ಕಚ್ಚಾತೈಲ ಸಮರ ಭಾರತದ ಮೇಲೆ ಅಂತಹ ವ್ಯತಿರಿಕ್ತ ಪರಿಣಾಮ ಬೀರದು ಎಂದು ಅಂದಾಜಿಸಲಾಗಿದೆ. ಆದರೂ ಕಡಿಮೆ ಬೆಲೆಗೆ ಕಚ್ಚಾತೈಲ ಪಡೆಯುವ ಭಾರತ ಆಮದು ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸೌದಿ ಪಟ್ಟು ಹಿಡಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
1991 ರ ಬಳಿಕ ಕಂಡ ಭಾರಿ ಕುಸಿತ :ಬ್ರೆಂಟ್ ಕ್ರೂಡ್ ಪ್ಯೂಚರ್ ಷೇರುಗಳು ಶೇ. 30 ರಷ್ಟು ಕುಸಿತ ಕಾಣುವ ಮೂಲಕ ಬ್ಯಾರಲ್ವೊಂದಕ್ಕೆ 31.02 ಡಾಲರ್ ಆಗಿದೆ. ಇದು 1991 ರ ಬಳಿಕ ಕಂಡ ಭಾರಿ ಕುಸಿತ ಎನ್ನಲಾಗಿದೆ. ಪ್ರಸ್ತುತ ಕಚ್ಚಾ ತೈಲ ಬೆಲೆ ಬ್ಯಾರಲ್ವೊಂದಕ್ಕೆ 66 ಡಾಲರ್ ಇದ್ದು, ಇದರಲ್ಲಿ ಸುಮಾರ ಶೇ. 10 ರಷ್ಟು ಕುಸಿತ ಕಂಡಿದೆ. ಈ ಪರಿಣಾಮ 9 ತಿಂಗಳ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ.