ಕರ್ನಾಟಕ

karnataka

By

Published : Jul 29, 2020, 9:29 PM IST

ETV Bharat / business

ವಂದೇ ಭಾರತ ಮಿಷನ್: ಟ್ರಾವೆಲ್‌ ಏಜೆಂಟರ್‌ಗಳು ಹೆಚ್ಚು ಹಣ ಕೇಳಿದ್ರೆ ಹೀಗೆ ಮಾಡಿ..

ಟ್ರಾವೆಲ್​ ಏಜೆಂಟರ್​ ಮೂಲಕ ಎಬಿಎಂ ವಿಮಾನಗಳ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ದರಗಳಿಗಿಂತ ಹೆಚ್ಚಿನ ಹಣ ಪಾವತಿಸಬಾರದು ಎಂಬುದನ್ನು ದಯವಿಟ್ಟು ಗಮನಿಸಿ. ಟ್ರಾವೆಲ್ ಏಜೆಂಟ್‌ಗಳಿಂದ ಅಧಿಕ ಶುಲ್ಕ ವಿಧಿಸುವ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರಯಾಣಿಕರು gmsm@airindia.inಗೆ ತಿಳಿಸಬಹುದು ಎಂದು ಟ್ವಿಟರ್ ಮುಖೇನ ತಿಳಿಸಿದೆ.

Flights Fares
ವಿಮಾನ ದರ

ನವದೆಹಲಿ: ವಂದೇ ಭಾರತ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ಏರ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಬಾರದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಬುಧವಾರ ತಿಳಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಮಾರ್ಚ್ 23ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಇದಾದ ಬಳಿಕ, ವಿದೇಶಗಳಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ವಂದೇ ಭಾರತ ಮಿಷನ್ ಅನ್ನು ಸರ್ಕಾರ​ ಆರಂಭಿಸಿತ್ತು.

ಮೇ 6ರಿಂದ ವಂದೇ ಭಾರತ ಮಿಷನ್ ಅಡಿಯಲ್ಲಿ ಅಂತಾರಾಷ್ಟ್ರೀಯ ಚಾರ್ಟರ್ ಫ್ಲೈಟ್‌ಗಳನ್ನು ಏರ್ ಇಂಡಿಯಾ ನಿರ್ವಹಿಸುತ್ತಿದ್ದು, ವಿದೇಶಗಳಲ್ಲಿ ಸಿಕ್ಕಿಬಿದ್ದ ಜನರು ತಮ್ಮ ತವರು ಊರಿಗೆ ತಲುಪಲು ನೆರವಾಗುತ್ತಿದೆ. ಇದರ ಜೊತೆಗೆ, ಖಾಸಗಿ ವಾಹಕಗಳು ಕೂಡಾ ಈ ಕಾರ್ಯಾಚರಣೆಯ ಅಡಿಯಲ್ಲಿ ನಿರ್ದಿಷ್ಟ ಸಂಖ್ಯೆಯ ವಿಮಾನಗಳನ್ನು ನಿರ್ವಹಿಸುತ್ತಿವೆ.

ಟ್ರಾವೆಲ್​ ಏಜೆಂಟರ್​ ಮೂಲಕ ಎಬಿಎಂ ವಿಮಾನಗಳ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ದರಗಳಿಗಿಂತ ಹೆಚ್ಚಿನ ಹಣ ಪಾವತಿಸಬಾರದು ಎಂಬುದನ್ನು ದಯವಿಟ್ಟು ಗಮನಿಸಿ. ಟ್ರಾವೆಲ್ ಏಜೆಂಟ್‌ಗಳಿಂದ ಅಧಿಕ ಶುಲ್ಕ ವಿಧಿಸುವ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರಯಾಣಿಕರು gmsm@airindia.inಗೆ ತಿಳಿಸಬಹುದು ಎಂದು ಟ್ವಿಟರ್ ಮುಖೇನ ತಿಳಿಸಿದೆ.

ABOUT THE AUTHOR

...view details