ಕರ್ನಾಟಕ

karnataka

ETV Bharat / business

ವಿದ್ಯುತ್‌ ಬಿಲ್‌, ರಿಚಾರ್ಜ್‌ಗಾಗಿ ಪ್ರತಿ ತಿಂಗಳು 1 ಸಾವಿರ ರೂ. ಸಾಲ: Paytmನಿಂದ 'ಈಗ ಪಡೆಯಿರಿ, ನಂತರ ಪಾವತಿಸಿ' ಯೋಜನೆ - 1 ಸಾವಿರ ರೂಪಾಯಿ ಸಾಲ

ವಿದ್ಯುತ್‌ ಬಿಲ್‌ ಕಟ್ಟುವ ಕೊನೆ ದಿನ ಯಾವಾಗ? ಮೊಬೈಲ್ ಡೇಟಾ ಪ್ಯಾಕ್ ಅವಧಿ ಮುಗಿದಿದ್ರೆ ರಿಚಾರ್ಜ್‌ಗೆ ದುಡ್ಡು ಇಲ್ವಲ್ಲಾ ಅಂತ ಯೋಜನೆ ಮಾಡುತ್ತಿದ್ದೀರಾ? ಹೀಗೆ ಯೋಚನೆ ಮಾಡುವ ಗ್ರಾಹಕರಿಗೆ Paytm ಬಂಪರ್ ಕೊಡುಗೆ ನೀಡುತ್ತಿದೆ.

paytm offers rs 1000 loan every month for mobile recharge electricity bills
ವಿದ್ಯುತ್‌ ಬಿಲ್‌, ರಿಚಾರ್ಜ್‌ಗಾಗಿ ಪ್ರತಿ ತಿಂಗಳು 1 ಸಾವಿರ ರೂ. ಸಾಲ..!

By

Published : Jul 8, 2021, 6:25 PM IST

ಹೈದರಾಬಾದ್: ಪ್ರಮುಖ ಪೇಮೆಂಟ್‌ ಸಂಸ್ಥೆ ಪೇಟಿಎಂ ತನ್ನ ಗ್ರಾಹಕರಿಗೆ ಹೊಸ ಕೊಡುಗೆ ಪ್ರಕಟಿಸಿದೆ. 'ಈಗ ಖರೀದಿಸಿ ನಂತರ ಪಾವತಿಸಿ' (ಬಿಎನ್‌ಪಿಎಲ್) ಸೇವೆಗಳ ಭಾಗವಾಗಿ 'ಪೇಟಿಎಂ ಪೋಸ್ಟ್‌ಪೇಯ್ಡ್ ಮಿನಿ' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ.

ಇದರಲ್ಲಿ ಮಾಸಿಕ ಮನೆ ವೆಚ್ಚಗಳಿಗಾಗಿ ತ್ವರಿತ ಸಾಲ ಸೌಲಭ್ಯ ಪಡೆಯಬಹುದು. ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಪೇಟಿಎಂ ಈ ಸೇವೆಯನ್ನು ಪ್ರಾರಂಭಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ವೈಯಕ್ತಿಕ ತ್ವರಿತ ಕ್ರೆಡಿಟ್ 'ಪೇಟಿಎಂ ಪೋಸ್ಟ್‌ಪೇಯ್ಡ್'ನ ಮುಂದುವರಿದ ಭಾಗ ಇದಾಗಿದೆ.

ಈ ಹೊಸ ಸೇವೆಯಲ್ಲಿ ಪೇಟಿಎಂ ಗ್ರಾಹಕರು ತಿಂಗಳಿಗೆ ರೂ .250 ರಿಂದ 1000 ರೂ.ವರೆಗೆ ಸಾಲ ಪಡೆಯಬಹುದು. ಮೊಬೈಲ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಸಿಲಿಂಡರ್ ಬುಕಿಂಗ್, ವಿದ್ಯುತ್ ಮತ್ತು ನೀರಿನ ಬಿಲ್‌ಗಳಂತಹ ಮಾಸಿಕ ವೆಚ್ಚಗಳಿಗೆ ಈ ಕೊಡುಗೆ ಉಪಯುಕ್ತವಾಗಿದೆ ಎಂದು ಪೇಟಿಎಂ ಹೇಳಿದೆ. ಈ ಸಾಲಕ್ಕೆ ತಿಂಗಳ ಮಟ್ಟಿಗೆ ಯಾವುದೇ ಬಡ್ಡಿ ಇರುವುದಿಲ್ಲ. ಜೊತೆಗೆ ಯಾವುದೇ ಆ್ಯಕ್ಟಿವೇಷನ್ ಶುಲ್ಕಗಳು, ವಾರ್ಷಿಕ ಶುಲ್ಕಗಳು, ಕನಿಷ್ಠ ನಗದು ಉಳಿತಾಯವೂ ಅಗತ್ಯವಿಲ್ಲ ಎಂದು ಪೇಟಿಎಂ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆರೋಗ್ಯ ಖಾತೆಯಲ್ಲಿ ಬದಲಾವಣೆಯಾಯ್ತು, ವ್ಯಾಕ್ಸಿನೇಷನ್​ನಲ್ಲಿ ಬದಲಾವಣೆಯಾಗುವುದೇ?: ರಾಹುಲ್

ಹೊಸ ವೈಶಿಷ್ಟ್ಯವುಳ್ಳ ಸೇವೆಯನ್ನು ಗ್ರಾಹಕರಿಗೆ ನೀಡಲು ಕಂಪನಿ ನಿರ್ಧರಿಸಿದೆ ಎಂದು ಪೇಟಿಎಂ ಸಿಇಒ ಭಾವೇಶ್ ಗುಪ್ತಾ ಹೇಳಿದ್ದಾರೆ. ಜನರು ತಮ್ಮ ಸಾಲ ಪಡೆಯುವುದನ್ನು ಪ್ರಾರಂಭಿಸಲು ಮತ್ತು ಆರ್ಥಿಕ ಶಿಸ್ತು ಬೆಳೆಸಿಕೊಳ್ಳಲು ಸಹಾಯ ಮಾಡಲು ಬಯಸುತ್ತೇವೆ. ಪೋಸ್ಟ್‌ಪೇಯ್ಡ್ ಮೂಲಕ ನಾವು ಆರ್ಥಿಕತೆಯಲ್ಲಿನ ಬಳಕೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಿದ್ದೇವೆ. ನಮ್ಮ ಹೊಸ ಪೋಸ್ಟ್‌ಪೇಯ್ಡ್ ಮಿನಿ ಸೇವೆಯು ಗ್ರಾಹಕರು ತಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಮತ್ತು ಅವರ ಹಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಪೇಟಿಎಂ 2.3 ಶತಕೋಟಿ ನಿಧಿ ಸಂಗ್ರಹಣೆಗಾಗಿ ಗ್ರಾಹಕರತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಹೊಸ ಯೋಜನೆಯನ್ನು ಪರಿಚಯಿಸಿದೆ.

ABOUT THE AUTHOR

...view details