ಕರ್ನಾಟಕ

karnataka

ETV Bharat / business

ಹರಾಜು ಸಿದ್ಧಾಂತದಲ್ಲಿ ಸುಧಾರಣೆ ತಂದ ಇಬ್ಬರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್​ ಗೌರವ

ಪ್ರತಿ ವರ್ಷದಂತೆ ಈ ವರ್ಷವೂ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿ ಘೋಷಣೆಯಾಗಿದ್ದು, ಇಬ್ಬರು ಅರ್ಥಶಾಸ್ತ್ರಜ್ಞರಿಗೆ ಈ ಗೌರವ ಒಲಿದು ಬಂದಿದೆ.

Nobel Prize for Economics
Nobel Prize for Economics

By

Published : Oct 12, 2020, 3:59 PM IST

ಸ್ಟಾಕ್​ಹಾಮ್:ಅರ್ಥಶಾಸ್ತ್ರ ವಿಭಾಗದ 2020ನೇ ಸಾಲಿನ ನೊಬೆಲ್​ ಪ್ರಶಸ್ತಿ ಘೋಷಣೆಯಾಗಿದ್ದು, , ಪೌಲ್​ ಆರ್​​.ಮಿಲಿಗ್ರೋಮ್​ ಹಾಗೂ ರಾಬರ್ಟ್​ ಬಿ. ವಿಲ್ಸನ್​​​​ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.

'ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರ'ಗಳಿಗಾಗಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಆಲ್ಫ್ರೆಡ್​ ನೊಬೆಲ್​ ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿ ಪ್ರತಿ ವರ್ಷ ನೀಡಲಾಗುತ್ತಿದ್ದು, ಕಳೆದ ವರ್ಷ ಮ್ಯಸಾಚುಸೆಟ್ಸ್​​ ಇನ್​​ಸ್ಟಿಟ್ಯೂಟ್​​ ಆಫ್​ ಟೆಕ್ನಾಲಜಿಯ ಇಬ್ಬರು ಸಂಶೋಧರಿಕೆಗೆ ಈ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.

2020ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್​ ಘೋಷಣೆ

ಆರ್ಥಿಕ ಕ್ಷೇತ್ರದಲ್ಲಿ ಸ್ವೆರಿಜಸ್ ರಿಕ್ಸ್‌ಬ್ಯಾಂಕ್ ಪ್ರಶಸ್ತಿ ಎಂದು ಇದಕ್ಕೆ ಹೆಸರಿಡಲಾಗಿದ್ದು, 1969 ರಲ್ಲಿ ಸ್ಥಾಪನೆಯಾಗಿದೆ. ಇಲ್ಲಿಯವರೆಗೆ 51 ಸಾರಿ ಈ ಗೌರವ ನೀಡಲಾಗಿದೆ.

ABOUT THE AUTHOR

...view details