ಕರ್ನಾಟಕ

karnataka

ETV Bharat / business

PAN ಕಾರ್ಡ್​ಗೆ ಆಧಾರ್ ಜೋಡಣೆ ಸೆ.​1ಕ್ಕೆ ಕೊನೆ: 58 ಸೆಕೆಂಡ್​ನಲ್ಲಿ ಹೀಗೆ ಲಿಂಕ್ ಮಾಡಿ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್ ಜೊತೆಗೆ ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯ. ನಿಮ್ಮ ಪಾನ್ ಕಾರ್ಡ್​ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಸೆಪ್ಟೆಂಬರ್​ 1ರ ಕೊನೆಯ ದಿನವಾಗಿದೆ. ಅಸ್ತಿತ್ವದಲ್ಲಿರುವ 400 ಮಿಲಿಯನ್ ಪಾನ್​ ಕಾರ್ಡ್‌ಗಳಲ್ಲಿ 180 ಮಿಲಿಯನ್​ ಕಾರ್ಡ್​ಗಳು ಸಂಪರ್ಕ ಹೊಂದಿಲ್ಲ. ಹೀಗಾಗಿ, ಆಧಾರ್‌ಗೆ ಸಂಪರ್ಕ ಹೊಂದಿಲ್ಲದ ಎಲ್ಲ ಪಾನ್ ಕಾರ್ಡ್‌ಗಳನ್ನು ಅಮಾನ್ಯಗೊಳಿಸಲಾಗುವುದು ಎಂದು ಐಟಿ ಇಲಾಖೆ ಎಚ್ಚರಿಸಿದೆ.

By

Published : Jul 11, 2019, 5:30 PM IST

ಸಾಂದರ್ಭಿಕ ಚಿತ್ರ

ನವದೆಹಲಿ:ಸೆಪ್ಟೆಂಬರ್​ 1ರೊಳಗೆ ಪಾನ್ ಕಾರ್ಡ್ ಇರುವವರು ಆಧಾರ್ ಸಂಖ್ಯೆಯನ್ನು ಜೋಡಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ನಿರ್ದೇಶಿಸಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್ ಜೊತೆಗೆ ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯವಾಗಿದೆ. ನಿಮ್ಮ ಪಾನ್ ಕಾರ್ಡ್​ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಸೆಪ್ಟೆಂಬರ್​ 1ರ ಕೊನೆಯ ದಿನವಾಗಿದೆ. ಅಸ್ತಿತ್ವದಲ್ಲಿರುವ 400 ಮಿಲಿಯನ್ ಪಾನ್​ ಕಾರ್ಡುಗಳಲ್ಲಿ 180 ಮಿಲಿಯನ್​ ಕಾರ್ಡ್​ಗಳು ಸಂಪರ್ಕ ಹೊಂದಿಲ್ಲ. ಹೀಗಾಗಿ, ಆಧಾರ್‌ಗೆ ಸಂಪರ್ಕ ಹೊಂದಿಲ್ಲದ ಎಲ್ಲ ಪ್ಯಾನ್ ಕಾರ್ಡ್‌ಗಳನ್ನು ಅಮಾನ್ಯಗೊಳಿಸಲಾಗುವುದು ಎಂದು ಎಚ್ಚರಿಸಿದೆ.

ಪಾನ್ ಕಾರ್ಡ್​ಗೆ ಆಧಾರ್ ಸಂಖ್ಯೆ ಲಿಂಕ್ ಮಾಡದವರು ಈ ಕೆಳಗಿರುವ ಯಾವುದಾದರೂ ಒಂದು ವಿಧಾನದ ಮುಖಾಂತರ ಪಾನ್​ನೊಂದಿಗೆ ಆಧಾರ್ ಜೋಡಿಸಬಹುದು.

*ww.incometaxindiaefiling.gov.in ವೆಬ್​ತಾಣಕ್ಕೆ ಭೇಟಿ ನೀಡಿ ಲಿಂಕ್ ಆಧಾರ್ ಎನ್ನುವ ಲಿಂಕ್‌ ಒತ್ತಿ ಆಧಾರ್ ಜೋಡಿಸಬಹುದು.

1. ಈ ಜಾಲತಾಣದ ಎಡಭಾಗದಲ್ಲಿ ಆಧಾರ್ ಜೋಡಣೆ (Link Aadhaar) ಎಂಬ ಲಿಂಕ್ ನೀಡಲಾಗಿದೆ. ಇದನ್ನು ಕ್ಲಿಕ್ಕಿಸಿದರೆ ಆಧಾರ್-ಪ್ಯಾನ್ ಜೋಡಣೆಯ ಪ್ರತ್ಯೇಕ ವಿಭಾಗ ತೆರೆದುಕೊಳ್ಳುತ್ತದೆ.

2. ಈ ವಿಭಾಗದಲ್ಲಿ ತೆರಿಗೆದಾರರು ಮೊದಲ ಬಾಕ್ಸ್​ನಲ್ಲಿ ತಮ್ಮ ಪ್ಯಾನ್ ಕಾರ್ಡ್ ನಂಬರ್, 2ನೇ ಬಾಕ್ಸ್​ನಲ್ಲಿ ಆಧಾರ್ ನಂಬರ್, 3ನೇ ಬಾಕ್ಸ್​ನಲ್ಲಿ ಆಧಾರ್​ನಲ್ಲಿರುವಂತೆ ತಮ್ಮ ಹೆಸರನ್ನು ನಮೂದಿಸಬೇಕು.
3. ಬಾಕ್ಸ್​ ಕೆಳಗೆ ಕಾಣುವ ಕೋಡ್ ಅನ್ನು ಬಾಕ್ಸ್​ನಲ್ಲಿ ನಮೂದಿಸಿ ಅದರ ಕೆಳಗಿರುವ ಲಿಂಕ್ ಆಧಾರ್ ಎಂಬ ಬಾಕ್ಸ್ ಕ್ಲಿಕ್ಕಿಸಿದರೆ ಆಧಾರ್ ಮತ್ತು ಪ್ಯಾನ್ ಜೋಡಣೆ ಕಾರ್ಯ ಪೂರ್ಣಗೊಳ್ಳುತ್ತದೆ.

ಇತರೆ ಮಾರ್ಗಗಳು:
* ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಲಿಂಕ್ ಮಾಡಬಹುದು

* ಎಸ್‌ಎಂಎಸ್ ಮೂಲಕ ಜೋಡಿಸಲು UIDPAN<12-digit Aadhaar><10-digit PAN> ಎಂದು ಟೈಪ್ ಮಾಡಿ 567678 ಇಲ್ಲವೇ 56161ಗೆ ಎಸ್‌ಎಂಎಸ್ ಕಳಿಸಬಹುದು

* ಹೊಸ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗಲೂ ಕೂಡ ಪಾನ್ ನೊಂದಿಗೆ ಆಧಾರ್ ಜೋಡಿಸಲು ಅವಕಾಶವಿದೆ.

ABOUT THE AUTHOR

...view details