ಕರ್ನಾಟಕ

karnataka

ETV Bharat / business

ಅಮೆರಿಕದಲ್ಲಿ 130 ರೂ. ಕುಸಿದ ಕಚ್ಚಾ ತೈಲ ಬೆಲೆ... ಭಾರತದಲ್ಲಿ ಪೆಟ್ರೋಲ್​ ದರ ಕಡಿಮೆ ಏನಾದ್ರೂ ಆಯ್ತಾ?

ಈ ಹಿಂದಿನ ಮಾರುಕಟ್ಟೆ ವಹಿವಾಟಿನಲ್ಲಿ ಕಚ್ಚಾ ತೈಲ ದರ ಶೇ 3ರಷ್ಟು ಕುಸಿದಿತ್ತು. ವಿಶ್ವದ ಅತಿದೊಡ್ಡ ಆರ್ಥಿಕತೆ ಕ್ಷೀಣಿಸಿದೆ ಎಂಬ ಹೂಡಿಕೆದಾರರ ಕಾಳಜಿಯ ಸಂಕೇತವಾಗಿ ಅಮೆರಿಕದ ಖಜಾನೆ ಬಾಂಡ್ 2007ರ ನಂತರ ಇದೇ ಮೊದಲ ಬಾರಿಗೆ ಇಳಿಕೆಯಾಗಿದೆ.

ಸಾಂದರ್ಭಿಕ ಚಿತ್ರ

By

Published : Aug 16, 2019, 12:46 PM IST

ನ್ಯೂಯಾರ್ಕ್​​/ ನವದೆಹಲಿ:ಆರ್ಥಿಕ ಹಿಂಜರಿತದ ಕಾಳಜಿಯ ಒತ್ತಡ ಹಾಗೂ ಅಮೆರಿಕದ ಕಚ್ಚಾ ದಾಸ್ತಾನುಗಳ ಅಚ್ಚರಿಯ ಚೇತರಿಕೆ ಪರಿಣಾಮ ಗುರುವಾರ ತೈಲ ಬೆಲೆಯಲ್ಲಿ ಶೇ 1ಕ್ಕಿಂತ ಅಧಿಕ ಕುಸಿತ ಕಂಡಿದೆ.

ಈ ಹಿಂದಿನ ಮಾರುಕಟ್ಟೆ ವಹಿವಾಟಿನಲ್ಲಿ ಕಚ್ಚಾ ತೈಲ ದರ ಶೇ 3ರಷ್ಟು ಕುಸಿದಿತ್ತು. ವಿಶ್ವದ ಅತಿದೊಡ್ಡ ಆರ್ಥಿಕತೆ ಕ್ಷೀಣಿಸಿದೆ ಎಂಬ ಹೂಡಿಕೆದಾರರ ಕಾಳಜಿಯ ಸಂಕೇತವಾಗಿ
ಅಮೆರಿಕದ ಖಜಾನೆ ಬಾಂಡ್ 2007ರ ನಂತರ ಇದೇ ಮೊದಲ ಬಾರಿಗೆ ಇಳಿಕೆಯಾಗಿದೆ.

ಚೀನಾದ ಸರಕುಗಳ ಮೇಲೆ 300 ಬಿಲಿಯನ್​​ ಡಾಲರ್​​ ಸುಂಕ ವಿಧಿಸುವುದಾಗಿ ಘೋಷಿಸಿದ್ದ ಅಮೆರಿಕ, ಕೆಲ ದಿನಗಳ ಮಟ್ಟಿಗೆ ಮುಂದೂಡಿದೆ. ಪರಿಣಾಮ ಪ್ರತಿ ಬ್ಯಾರೆಲ್​ ಬ್ರೆಂಟ್​ ಕಚ್ಚಾ ತೈಲ ದರದಲ್ಲಿ 1.81 ಡಾಲರ್​ (₹ 130) ಅಥವಾ ಶೇ 3ರಷ್ಟು ಇಳಿಕೆಯಾಗಿ 57.67 ಡಾಲರ್​ಗೆ ತಲುಪಿದೆ. ಜಾಗತಿಕ ಬೆಂಚ್​ ಮಾರ್ಕ್​ 1.52 ಡಾಲರ್​ ಅಥವಾ ಶೇ 2.6 ಇಳಿದು, ಪ್ರತಿ ಬ್ಯಾರೆಲ್​​ 57.96 ಡಾಲರ್​ನಲ್ಲಿ ಮಾರಾಟ ಆಗುತ್ತಿದೆ.

ಭಾರತದಲ್ಲಿ ಚಿಲ್ಲರೆ ಇಂಧನ ಮಾರಾಟ ದರ ಸ್ಥಿರ:

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಯಥಾವತ್ತಾಗಿ ಕಾಪಾಡಿಕೊಂಡಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್​ ₹ 71.99 ಹಾಗೂ ಡೀಸೆಲ್​ ₹ 65.43ರಲ್ಲಿ ಮಾರಾಟ ಆಗುತ್ತಿದೆ.

ಕೋಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ & ಡೀಸೆಲ್​ ಮೇಲೆ ಕ್ರಮವಾಗಿ ₹ 74.69 & ₹ 67.81, ₹ 77.65 & ₹ 68.60, ₹ 74.78 & 69.13 ಹಾಗೂ ₹ 74.42 & ₹ 67.63 ರಲ್ಲಿ ಮಾರಾಟ ಆಗುತ್ತಿದೆ.

ABOUT THE AUTHOR

...view details