ಕರ್ನಾಟಕ

karnataka

ETV Bharat / business

'ಕೈಗಾರಿಕೆಗೆ ಕಚ್ಚಾವಸ್ತುಗಳ ಆಮದು ತಪ್ಪಲ್ಲ, ಗಣೇಶ ಮೂರ್ತಿಗಳನ್ನೂ ಚೀನಾದಿಂದ್ಲೇ ತರಿಸಿಕೊಳ್ಬೇಕೇ?'

ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಜೇಡಿಮಣ್ಣಿನಿಂದ ಮಾಡಿದ ಗಣೇಶ ವಿಗ್ರಹಗಳನ್ನು ಸ್ಥಳೀಯ ಕುಂಬಾರರಿಂದ ಸಾಂಪ್ರದಾಯಿಕವಾಗಿ ಖರೀದಿ ಮಾಡಲಾಗುತ್ತಿದೆ. ಆದರೆ ಇಂದು ಆಗುತ್ತಿರುವುದೇನು? ಗಣೇಶ ವಿಗ್ರಹಗಳನ್ನೂ ಸಹ ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿ ಏಕೆ? ನಾವು ಜೇಡಿಮಣ್ಣಿನಿಂದ ಗಣೇಶ ವಿಗ್ರಹವನ್ನು ಮಾಡಲು ಸಾಧ್ಯವಾಗುವುದಿಲ್ಲವೇ? ಅದು ಒಂದು ಪರಿಸ್ಥಿತಿಯೇ? ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

By

Published : Jun 25, 2020, 5:59 PM IST

Nirmala Sitharaman
ನಿರ್ಮಲಾ ಸೀತಾರಾಮನ್

ಚೆನ್ನೈ:ಒಂದು ದೇಶ ವಿವಿಧ ದೇಶಗಳಿಂದ ವಸ್ತುಗಳನ್ನುಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಚೀನಾದಿಂದ ಗಣೇಶ ವಿಗ್ರಹಗಳನ್ನೂ ನಾವು ತರಿಸಿಕೊಳ್ಳುತ್ತಿರುವುದಕ್ಕೆ ನನಗೆ ಅಚ್ಚರಿಯಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೈಗಾರಿಕೆಗಳಿಗೆ ದೇಶದಲ್ಲಿ ಲಭ್ಯವಿಲ್ಲದ ಅಗತ್ಯ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ತಪ್ಪಲ್ಲ ಎಂದು ಬಿಜೆಪಿಯ ತಮಿಳುನಾಡು ಘಟಕದ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ಲಿಂಕ್ ಮೂಲಕ ಅವರು ಅಭಿಪ್ರಾಯಪಟ್ಟರು.

ಆಮದು ಪ್ರಕ್ರಿಯೆ ದೇಶದಲ್ಲಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರ ಜೊತೆಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವುದರಿಂದ ಅದನ್ನು ಖಂಡಿತವಾಗಿಯೂ ಮಾಡಬಹುದು ಎಂದು ಕೇಂದ್ರದ ಆತ್ಮನಿರ್ಭರ ಭಾರತ ಅಭಿಯಾನ ಉಪಕ್ರಮದಲ್ಲಿ ಮಾತನಾಡುತ್ತಾ ಉಲ್ಲೇಖಿಸಿದರು.

ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಜೇಡಿಮಣ್ಣಿನಿಂದ ಮಾಡಿದ ಗಣೇಶ ವಿಗ್ರಹಗಳನ್ನು ಸ್ಥಳೀಯ ಕುಂಬಾರರಿಂದ ಸಾಂಪ್ರದಾಯಿಕವಾಗಿ ಖರೀದಿ ಮಾಡಲಾಗುತ್ತಿದೆ. ಆದರೆ ಇಂದು, ಗಣೇಶ ವಿಗ್ರಹಗಳನ್ನು ಸಹ ಚೀನಾದಿಂದ ಏಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿ ಏಕೆ? ನಾವು ಜೇಡಿಮಣ್ಣಿನಿಂದ ಗಣೇಶ ವಿಗ್ರಹವನ್ನು ಮಾಡಲು ಸಾಧ್ಯವಾಗುವುದಿಲ್ಲವೇ? ಅದು ಒಂದು ಪರಿಸ್ಥಿತಿಯೇ? ಎಂದು ಪ್ರಶ್ನಿಸಿದರು.

ಸೋಪು ಪೆಟ್ಟಿಗೆ, ಪ್ಲಾಸ್ಟಿಕ್ ವಸ್ತುಗಳಾಗಲಿ ಅಥವಾ ಪೂಜಾ ಕೈಂಕರ್ಯಗಳಿಗೆ ಬಳಸುವ ಧೂಪದ್ರವ್ಯದ ತುಂಡುಗಳಂತಹ ನಿತ್ಯ ಬಳಸುವ ಗೃಹೋಪಯೋಗಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಸ್ವಾವಲಂಬನೆಯನ್ನು ಬೆಂಬಲಿಸುತ್ತದೆಯೇ? ಎಂದು ವಿತ್ತ ಸಚಿವೆ ಅಚ್ಚರಿ ವ್ಯಕ್ತಪಡಿಸಿದರು.

ಸ್ಥಳೀಯವಾಗಿ ತಯಾರಿಸಿದ ಮತ್ತು ಲಭ್ಯವಿರುವ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಇಂತಹ ಪರಿಸ್ಥಿತಿ ಬದಲಾಗಬೇಕು. ಸ್ವಾವಲಂಬನೆ ಎಂಬುದು ಆತ್ಮನಿರ್ಭರ ಅಭಿಯಾನದ ಹಿಂದಿನ ಮೂಲ ಆಲೋಚನೆ. ಭಾರತದಲ್ಲಿ ಸ್ವಾವಲಂಬನೆ ದೀರ್ಘಕಾಲ ಅಭ್ಯಾಸವಾಗಿತ್ತು. ಆದರೆ, ಅದು ತರುವಾಯ ಮರೆಯಾಯಿತು ಎಂದು ಸೀತಾರಾಮನ್​ ಹೇಳಿದರು.

ABOUT THE AUTHOR

...view details