ನವದೆಹಲಿ: ಬಹು ನಿರೀಕ್ಷಿತ ಐತಿಹಾಸಿಕ 2019-20ರ ಸಾಲಿನ ಮುಂಗಡ ಪತ್ರವನ್ನು ಭಾರತದ ಇತಿಹಾಸದಲ್ಲಿ ಮಹಿಳೆಯಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.
ಬಜೆಟ್ನಲ್ಲಿ 'ನಿರ್ಮಲಾ' ಜಾಣ್ಮೆ... ಶಿಸ್ತು ಸವಿಸ್ತಾರದ ಮುಂಗಡ ಪತ್ರ - ಮೋದಿ
ಆರ್ಥಿಕ ಅಡೆತಡೆಗಳ ನಡುವೆಯೂ ಕೃಷಿಕರು, ಬಡವರು, ಅಲ್ಪಸಂಖ್ಯಾತರು, ಹಿರಿಯರು ಮತ್ತು ಬುಡಕಟ್ಟು ಸಮುದಾಯಗಳಂಥ ದುರ್ಬಲ ವರ್ಗದವರ ಸಬಲೀಕರಣವನ್ನು ತಮ್ಮ ಆದ್ಯತೆಯಾಗಿ ಪರಿಗಣಿಸಿ ನಿರ್ಮಲಾ ಸೀತಾರಾಮನ್ ಆಯವ್ಯಯ ಮಂಡಿಸಿದ್ದಾರೆ.
ವಿತ್ತೀಯ ಶಿಸ್ತು ಹಾಗೂ ಜನಪ್ರಿಯತೆಯ ನಡುವೆ ಜಾಣ್ಮೆಯ ಆಯವ್ಯಯ ಮಂಡಿಸಿದ್ದಾರೆ. ವೇಗದ ಆರ್ಥಿಕತೆಯ ಕ್ಷೀಣಿಸುವಿಕೆ, ಜಾಗತಿಕ ಆರ್ಥಿಕ ದುರ್ಬಲತೆ, ನಗದು ದ್ರವ್ಯತ್ಯ ಅಭಾವ, ಏರಿಳಿತದ ಹಣದುಬ್ಬರ, ಕಳೆದ ಐದು ವರ್ಷಗಳಲ್ಲಿ ಜಿಡಿಪಿಯ ಕನಿಷ್ಠ ಮಟ್ಟಕ್ಕೆ ಇಳಿಕೆ, ಎನ್ಬಿಪಿಎಸ್ ಸಂಸ್ಥೆಗಳಲ್ಲಿ ಹಣದ ಕೊರತೆ ಸೇರಿದಂತೆ ಇತರೆ ಆರ್ಥಿಕ ಅಡೆತಡೆಗಳ ನಡುವೆಯೂ ಕೃಷಿಕರು, ಬಡವರು, ಅಲ್ಪಸಂಖ್ಯಾತರು, ಹಿರಿಯರು ಮತ್ತು ಬುಡಕಟ್ಟು ಸಮುದಾಯಗಳಂಥ ದುರ್ಬಲ ವರ್ಗದವರ ಸಬಲೀಕರಣವನ್ನು ತಮ್ಮ ಆದ್ಯತೆಯಾಗಿ ಪರಿಗಣಿಸಿ ಆಯವ್ಯಯ ಮಂಡಿಸಿದ್ದಾರೆ.
ಒಟ್ಟು 27.86 ಲಕ್ಷ ಕೋಟಿ ರೂ. ಮುಂಗಡ ಪತ್ರದಲ್ಲಿ ಉದ್ದೇಶಿತ ಯೋಜನಾ ಮತ್ತು ವರ್ಗಾವಣೆ ಮೇಲಿನ ವೆಚ್ಚಗಳಿಗೆ ₹ 15.83 ಲಕ್ಷ ಕೋಟಿ, ಯೋಜನಾ ವೆಚ್ಚಕ್ಕೆ ₹ 12.03 ಲಕ್ಷ ಕೋಟಿ, ಕೇಂದ್ರೀಯ ವಲಯವಾರು ಯೋಜನೆಗಳಿಗೆ ₹ 8.71 ಲಕ್ಷ ಕೋಟಿ, ಸಬ್ಸಿಡಿಗೆ ₹ 3.39 ಲಕ್ಷ ಕೋಟಿ, ಸಾಲದ ಬಡ್ಡಿ ಪಾವತಿಗೆ ₹ 6.60 ಲಕ್ಷ ಕೋಟಿ ತೆಗೆದಿರಿಸಿದೆ. ಜನರನ್ನು ಸೆಳೆಯುವ ಭಾಗ್ಯಗಳ ಯೋಜನಾ ನಿರೀಕ್ಷೆಗಳು ಸುಳ್ಳಾಗಿವೆ. ಆದಾಯ ತೆರಿಗೆ ಮಿತಿಯನ್ನು ಯಥಾಸ್ಥಿತಿಯಲ್ಲಿ ಉಳಿಸುವುದರ ಮೂಲಕ ವೇತನದಾರರಿಗೆ ನಿರಾಶೆಯನ್ನುಂಟು ಮಾಡಿದೆ.