ಕರ್ನಾಟಕ

karnataka

ETV Bharat / business

ಪೆಟ್ರೋಲ್​ ಬಂಕ್​ ತೆರೆಯುವ ಯೋಚನೆ ಇದೆಯೇ? ಈ ವಿಷ್ಯ ನಿಮಗೆ ಗೊತ್ತಿರಲಿ..

ಹೊಸದಾಗಿ ತೆರೆಯುವ ಪೆಟ್ರೋಲ್​ ಬಂಕ್​ಗಳನ್ನು ಶೈಕ್ಷಣಿಕ ಕೇಂದ್ರ, ಆಸ್ಪತ್ರೆ ಹಾಗೂ ವಸತಿ ಪ್ರದೇಶದಿಂದ 50 ಮೀಟರ್ ದೂರದಲ್ಲಿ ಸ್ಥಾಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಕಳೆದ ವಾರವಷ್ಟೇ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೂತನ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.

petrol pumps
ಪೆಟ್ರೋಲ್ ಬಂಕ್

By

Published : Jan 16, 2020, 5:23 PM IST

ನವದೆಹಲಿ: ಪೆಟ್ರೋಲ್ ಬಂಕ್​ ಸುತ್ತಲಿನ ಪರಿಸರದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಸ ಪೆಟ್ರೋಲ್​ ಬಂಕ್ ತೆರೆಯುವವರಿಗೆ ಕೆಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಹೊಸದಾಗಿ ತೆರೆಯುವ ಪೆಟ್ರೋಲ್​ ಬಂಕ್​ಗಳನ್ನು ಶೈಕ್ಷಣಿಕ ಕೇಂದ್ರ, ಆಸ್ಪತ್ರೆ ಹಾಗೂ ವಸತಿಯಿಂದ 50 ಮೀಟರ್ ದೂರದಲ್ಲಿ ಸ್ಥಾಪಿಸಬೇಕು.ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ, ಹೊಸ ಪೆಟ್ರೋಲ್‌ ಪಂಪ್‌ ಸ್ಥಾಪನೆಗೆ ಈ ನಿಯಮ ಅನ್ವಯ ಆಗಲಿದೆ. ಪ್ರತಿ 300 ಕಿಲೋ ಲೀಟರ್​ ತೈಲ ಮಾರಾಟ ಸಾಮರ್ಥ್ಯ ಹೊಂದಿರುವ ಪೆಟ್ರೋಲ್‌ ಪಂಪ್‌ಗಳು ಆವಿ ನಿಯಂತ್ರಣ ಅಳವಡಿಸಿಕೊಳ್ಳುವಂತೆಯೂ ಆದೇಶಿಸಿದೆ.

ABOUT THE AUTHOR

...view details