ನವದೆಹಲಿ :ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಈ ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಹಾಗೂ ಪ್ರತಿಭಟನೆ ನಡೆಸಿದರು. ಆದರೂ ಯಾವುದೇ ಚರ್ಚೆಯಿಲ್ಲದೆ ಮಸೂದೆ ಅಂಗೀಕಾರವಾಗಿದೆ.
ಈ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ಸೀತಾರಾಮನ್, ನಾವು ಈ ಮಸೂದೆಯನ್ನು ಏಕೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ಆದಾಯದ ಮೇಲೆ ತೆರಿಗೆ ವಿಧಿಸುವ ವಿಷಯದ ಸಂಬಂಧ ಪೂರ್ವಾನ್ವಯ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ಹಾಗೂ ವಿದೇಶಿ ಕಂಪನಿಯ ಷೇರುಗಳ ವರ್ಗಾವಣೆಯಿಂದ ಭಾರತೀಯ ಸ್ವತ್ತುಗಳ ಸಮಸ್ಯೆಯು ಸುದೀರ್ಘ ವ್ಯಾಜ್ಯಗಳಿಗೆ ಒಳಪಟ್ಟಿತ್ತು.
ಕೆಲ ಆದಾಯಗಳು ತೆರಿಗೆ ಕಾಯ್ದೆ ಅಡಿ ಬರುವುದಿಲ್ಲ. ಇದನ್ನು ಸುಪ್ರೀಂಕೋರ್ಟ್ ಕೂಡ ತಳ್ಳಿ ಹಾಕಿತ್ತು ಎಂದು ಹೇಳಿದ್ದಾರೆ. ಇದರ ಪರಿಣಾಮವಾಗಿ, ಆದಾಯ ತೆರಿಗೆ ಕಾಯಿದೆ-1961 ಅನ್ನು ತಿದ್ದುಪಡಿ ಮಾಡಿ ಹಣಕಾಸು ಕಾಯಿದೆ-2012ಯನ್ನು ಜಾರಿಗೆ ತರಲಾಗಿತ್ತು.