ಕರ್ನಾಟಕ

karnataka

By

Published : Dec 3, 2019, 9:21 AM IST

ETV Bharat / business

ಈ ವಿಚಾರದಲ್ಲಿ ವಿಶ್ವದಲ್ಲೇ ಭಾರತವೇ ಅಗ್ಗ..! ಕೇಂದ್ರ ಸಚಿವರ ಟ್ವೀಟ್​ ಹೇಳ್ತಿರೋದೇನು?

ಭಾರತದಲ್ಲಿ  ಕೇವಲ .26 ಡಾಲರ್​​​ ಅಂದರೆ 11.78 ರೂ ಸರಾಸರಿಯಲ್ಲಿ ಒಂದು ಜಿಬಿ ಡೇಟಾವನ್ನ ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಒದಗಿಸುತ್ತಿವೆ ಎಂಬುದಾಗಿ ವರದಿಯೊಂದು ಹೇಳಿದೆ.

Mobile data is cheaper in India than any other countries
ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್

ನವದೆಹಲಿ:ವಿಶ್ವದ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲೇ ಅತ್ಯಂತ ಅಗ್ಗದ ದರದಲ್ಲಿ 1 ಜಿಬಿ ಮೊಬೈಲ್​ ಇಂಟರ್​ನೆಟ್​ ಲಭ್ಯವಾಗುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂಗ್ಲೆಂಡ್​ ಮೂಲದ cable.co.uk ಸಂಸ್ಥೆಯ ಈ ಸಮೀಕ್ಷೆಯನ್ನು ಉಲ್ಲೇಖಿಸಿದ್ದಾರೆ.

ಭಾರತದಲ್ಲಿ ಕೇವಲ 0.26 ಡಾಲರ್​​​ ಅಂದರೆ 11.78 ರೂ ಸರಾಸರಿಯಲ್ಲಿ ಒಂದು ಜಿಬಿ ಡೇಟಾವನ್ನ ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಒದಗಿಸುತ್ತಿವೆ ಎಂದಿದೆ. ಇದನ್ನೇ ಯುಪಿಎ ಆಡಳಿತಾವಧಿಗೆ ಹೋಲಿಸಿರುವ ಸಚಿವರು, ಆಗ ಇಂದು ಜಿಬಿಗೆ ಗ್ರಾಹಕರು 269 ರೂ. ತೆರಬೇಕಾಗಿತ್ತು ಎಂದಿದ್ದಾರೆ.

ರಷ್ಯಾದಲ್ಲಿ 0.91 ಡಾಲರ್​ಗೆ ಒಂದು ಜಿಬಿ ಡೇಟಾ ಸಿಕ್ಕರೆ, ಇಟಲಿಯಲ್ಲಿ 1.73 ಡಾಲರ್​, ನೈಜಿರಿಯಾದಲ್ಲಿ 2.2, ಆಸ್ಟ್ರೇಲಿಯಾದಲ್ಲಿ 2.47 ಇಂಗ್ಲೆಂಡ್​ನಲ್ಲಿ 6.66 ಅಮೆರಿಕಾದಲ್ಲಿ 12.37 ಸ್ವಿಡ್ಜರ್​​ಲೆಂಡ್​​ನಲ್ಲಿ 20.22 ಡಾಲರ್​​ಗೆ ಒಂದು ಒಂದು ಬಿಜಿ ಡೇಟಾ ಸಿಗುತ್ತೆ ಎಂದು ಯುಕೆ ಸಂಸ್ಥೆಯೊಂದು ಸಮೀಕ್ಷೆಯಲ್ಲಿ ಹೇಳಿದೆ.

ABOUT THE AUTHOR

...view details