ಅನಂತಪುರ(ಆಂಧ್ರಪ್ರದೇಶ):ವಾಹನ ತಯಾರಕ ಸಂಸ್ಥೆಯಾದ ಕಿಯಾ ಇಂಡಿಯಾ, ಸುಮಾರು 5 ಲಕ್ಷ ವಾಹನಗಳನ್ನು ಆಂಧ್ರಪ್ರದೇಶದ ಅನಂತಪುರದಲ್ಲಿರುವ ಪ್ಲಾಂಟ್ನಿಂದ ರಫ್ತು ಮಾಡಿದೆ ಎಂದು ಮಂಗಳವಾರ ಮಾಹಿತಿ ನೀಡಿದೆ. ಈ ರಫ್ತು ದೇಶಿಯವಾಗಿ ಜನರಿಗೆ ಪೂರೈಕೆ ಮಾಡಿರುವುದು ಮಾತ್ರವಲ್ಲದೇ, ವಿದೇಶಿಗಳಿಗೆ ರಫ್ತು ಮಾಡುವ ಮಾರುಕಟ್ಟೆಗೆ ಪೂರೈಸುವುದನ್ನು ಒಳಗೊಂಡಿದೆ ಎಂದು ಕಿಯಾ ಸ್ಪಷ್ಟನೆ ನೀಡಿದೆ.
ಇದರೊಂದಿಗೆ ದೇಶದಲ್ಲಿ ನಾಲ್ಕು ಲಕ್ಷ ಯುನಿಟ್ಗಳನ್ನು ಕಿಯಾ ಮಾರಾಟ ಮಾಡಿದೆ. 2019ರ ಸೆಪ್ಟೆಂಬರ್ನಲ್ಲಿ ಸೆಲ್ಟೋಸ್ ಕಾರನ್ನು ಮಾರಾಟ ಮಾಡಲು ಆರಂಭ ಮಾಡಿದ ನಂತರ 91ಕ್ಕೂ ಹೆಚ್ಚು ದೇಶಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಫ್ತು ಮಾಡಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಒಟ್ಟು 5 ಲಕ್ಷ ಯುನಿಟ್ಗಳನ್ನು ಮಾರಲಾಗಿದೆ.
ಕಿಯಾ ಇಂಡಿಯಾವು 2021ರ ವಾಹನ ರಫ್ತು ವಹಿವಾಟಿನಲ್ಲಿ ಶೇಕಡಾ 25ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಈ ಮೂಲಕ ದೇಶದಲ್ಲಿ ವಾಹನಗಳ ರಫ್ತುಗಳಲ್ಲಿ ಪ್ರಮುಖ ಕಂಪನಿಯಾಗಿ ಮಾರ್ಪಟ್ಟಿದೆ.