ಕರ್ನಾಟಕ

karnataka

ETV Bharat / business

3 ದಶಕಗಳ ಕನಿಷ್ಠ ಮಟ್ಟಕ್ಕಿಳಿದ ಭಾರತದ ಚಿನ್ನದ ಆಮದು

ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ವಿಮಾನ ಪ್ರಯಾಣ ನಿರ್ಬಂಧ ಹಾಗೂ ಆಭರಣ ಮಳಿಗೆಗಳು ಮುಚ್ಚಿದ ಪರಿಣಾಮ ಚಿನ್ನದ ಖರೀದಿಯಲ್ಲೂ ಭಾರೀ ಇಳಿಕೆ ಕಂಡು ಬಂದಿದೆ.

Gold Import
ಚಿನ್ನ ಆಮದು

By

Published : May 5, 2020, 5:20 PM IST

ನವದೆಹಲಿ:ಭಾರತ ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣ ಕಳೆದ ಮೂರು ದಶಕಗಳಲ್ಲಿ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ.

ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ವಿಮಾನ ಪ್ರಯಾಣ ನಿರ್ಬಂಧ ಹಾಗೂ ಆಭರಣ ಮಳಿಗೆಗಳು ಮುಚ್ಚಿದ ಚಿನ್ನದ ಖರೀದಿಯಲ್ಲೂ ಭಾರೀ ಇಳಿಕೆ ಕಂಡುಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಏಪ್ರಿಲ್‌ನಲ್ಲಿ ಚಿನ್ನದ ಆಮದು ಪ್ರಮಾಣ ಶೇ 99.9ರಷ್ಟು ಇಳಿಕೆಯಾಗಿದೆ.

ವಿಶ್ವದಲ್ಲಿ ಅತ್ಯಧಿಕ ಚಿನ್ನ ಬಳಕೆ ಮಾಡುವ ಎರಡನೇ ರಾಷ್ಟ್ರ ಭಾರತ ಆಗಿದ್ದು, ಏಪ್ರಿಲ್‌ನಲ್ಲಿ ಸುಮಾರು 50 ಕೆ.ಜಿ. ಚಿನ್ನದ ಗಟ್ಟಿ ಆಮದು ಮಾಡಿಕೊಂಡಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 110.18 ಟನ್‌ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ.

ಕಳೆದ ವರ್ಷ ಏಪ್ರಿಲ್‌ಗೆ ಹೋಲಿಸಿದರೆ ಆಮದು ಮೌಲ್ಯ 397 ಕೋಟಿ ಡಾಲರ್‌ನಿಂದ 28.4 ಲಕ್ಷ ಡಾಲರ್‌ಗೆ ಇಳಿದಿದೆ.

ABOUT THE AUTHOR

...view details