ನವದೆಹಲಿ:ಭಾರತೀಯರು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ 188 ಬಿಲಿಯನ್ ನಿಮಿಷಗಳನ್ನು ಕಳೆದಿದ್ದಾರೆ ಎಂದು ಬೆಂಗಳೂರು ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್‌ಸೀರ್ ತಿಳಿಸಿದೆ.
ಅತಿ ಹೆಚ್ಚು ವೀಕ್ಷಣೆಯು ದೈನಂದಿನ ಸೀರಿಯಲ್ 69 ಬಿಲಿಯನ್ ನಿಮಿಷ, ಆ ನಂತರ 31 ಬಿಲಿಯನ್ ನಿಮಿಷಗಳಷ್ಟು ಕಾಲ ಚಲನಚಿತ್ರಗಳನ್ನು ವೀಕ್ಷಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿನ ಉಚಿತ ಟೆಲಿಕಾಂ ಆಫರ್, ಸ್ಮಾರ್ಟ್ಫೋನ್ ಬಳಕೆದಾರರ ಮೂಲಕ ಒಟಿಟಿ ಚಂದಾದಾರಿಕೆಗಳ ಸಂಖ್ಯೆ ಹೆಚ್ಚಲು ನೆರವಾಗಿದೆ ಎಂಬುದನ್ನು ವರದಿ ಹೇಳಿದೆ.
ವೂಟ್ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ದೈನಂದಿನ ಸೀರಿಯಲ್ನಲ್ಲಿ ಪ್ರಾಬಲ್ಯ ಸಾಧಿಸಿದೆ. ಇತರರು ಒಟ್ಟಾಗಿ ಶೇ 31ರಷ್ಟು ಪಾಲು ಪಡೆದುಕೊಂಡಿದ್ದಾರೆ. ಹಾಟ್ಸ್ಸ್ಟಾರ್ ಚಲನಚಿತ್ರಗಳ ವಿಭಾಗದ ವೀಕ್ಷಣೆಯಲ್ಲಿ ಶೇ 33ರಷ್ಟು ಪಾಲು ಹೊಂದಿದೆ ಎಂದು ರೆಡ್‌ಸೀರ್ ತಿಳಿಸಿದೆ.
ಬಳಕೆದಾರರು ತಮ್ಮ ಮನೆಗಳಿಂದ ಹೊರಬರಲು ಇಚ್ಛಿಸುತ್ತಿಲ್ಲ. ಮುಖ್ಯವಾಹಿನಿಯ ಸಿನಿಮಾಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಪ್ರೊಡಕ್ಷನ್ ಹೌಸ್‌ಗಳು ಹೊಸ ಕಟೆಂಟ್ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲು ಪ್ರಾರಂಭಿಸಿದವು. ಹೆಚ್ಚು - ಹೆಚ್ಚು ನೈಜತೆಗೆ ಹತ್ತಿರವಿರುವ ಕಂಟೆಂಟ್ಗಳ ಬೇಡಿಕೆ ಹೆಚ್ಚಾದಂತೆ ಪ್ರೊಡಕ್ಷನ್ ಸಹ ಏರಿಕೆಯಾಯಿತು ಎಂದು ರೆಡ್‌ಸೀರ್‌ನ ನಿಖಿಲ್ ದಲಾಲ್ ಮತ್ತು ಉಜ್ವಾಲ್ ಚಧುರಿ ಹೇಳಿದರು.