ನವದೆಹಲಿ: ಬ್ಲ್ಯಾಕ್ ಫ್ರೈಡೇ ಮಾರಾಟಕ್ಕೆ ಜಗತ್ತು ಸಜ್ಜಾಗುತ್ತಿದೆ. ಅಮೆರಿಕಲ್ಲಿ ಆಚರಿಸುವ ಥ್ಯಾಂಕ್ಸ್ ಗಿವಿಂಗ್ ಡೇ ಬಳಿಕ, ಪ್ರತೀ ವರ್ಷ ಈ ಬ್ಲ್ಯಾಕ್ ಫ್ರೈಡೇ ಸೇಲ್ ಬರುತ್ತದೆ. ಹೀಗಾಗಿ, ಈ ಬಾರಿ ನವೆಂಬರ್ 27 ರಂದು ಪ್ರಾರಂಭಗೊಂಡು 30 ರಂದು ಕೊನೆಯಾಗುವ ಬ್ಲ್ಯಾಕ್ ಫ್ರೈಡೇ ಸೇಲ್ನಲ್ಲಿ ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ಘೋಷಿಸಿವೆ.
ರಿಯಲ್ ಮೀ ತನ್ನ ಬ್ಲ್ಯಾಕ್ ಫ್ರೈಡೇ ಮಾರಾಟದ ಭಾಗವಾಗಿ ಅನೇಕ ಉತ್ಪನ್ನಗಳಲ್ಲಿ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿದೆ. ರಿಯಲ್ ಮೀ 6 ಐ, ರಿಯಲ್ ಮೀ 6, ರಿಯಲ್ ಮೀ ಎಕ್ಸ್ 3 ಸೂಪರ್ ಝೂಮ್ ಮತ್ತು ಎಕ್ಸ್ 50 ಪ್ರೊ ಸೇರಿದಂತೆ ರಿಯಲ್ ಮೀ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಭಾರೀ ರಿಯಾಯಿತಿ ಘೋಸಿಲಾಗಿದೆ. ವಿವಿಧ ಆರ್ಟಿಫಿಶಿಯಲ್ ಇಂಟರ್ ನೆಟ್ ಆಫ್ ತಿಂಗ್ಸ್ (ಎಐಒಟಿ) ಉತ್ಪನ್ನಗಳಾದ ರಿಯಲ್ ಮೀ ಬಡ್ಸ್ ಕ್ಲಾಸಿಕ್, ರಿಯಲ್ ಸ್ಮಾರ್ಟ್ ವಾಚ್, ರಿಯಲ್ ಮೀ ಬಡ್ಸ್ ಏರ್ ನಿಯೋ ಮತ್ತು ರಿಯಲ್ ಮೀ ಸ್ಮಾರ್ಟ್ ಕ್ಯಾಮ್ 360 ಡಿಗ್ರಿಗೆ ರಿಯಾಯಿತಿ ನೀಡಲಾಗ್ತಿದೆ.
ರಿಯಲ್ ಮೀ ಸಿ 3, ರಿಯಲ್ 6, ರಿಯಲ್ ಮೀ 6 ಐ ಮತ್ತು ನಾರ್ಝೋ 20 ಯ ಖರೀದಿಯ ಮೇಲೆ 1 ಸಾವಿರ ರೂವರೆಗಿನ ಬ್ಲ್ಯಾಕ್ ಫ್ರೈಡೇ ರಿಯಾಯಿತಿ ಅನ್ವಯವಾಗುತ್ತವೆ. ರಿಯಲ್ ಮೀ ಎಕ್ಸ್ 3 ಮತ್ತು ರಿಯಲ್ ಎಕ್ಸ್ 3 ಸೂಪರ್ ಝೂಮ್ಗಳ ಖರೀದಿಯಲ್ಲಿ 3 ಸಾವಿರ ರೂ. ನಿಂದ 4 ಸಾವಿರದವರೆಗೆ ರಿಯಾಯಿತಿ ಇದೆ. ಅದೇ ರೀತಿ ರಿಯಲ್ ಮೀ ಎಕ್ಸ್ 50 ಪ್ರೊ ಖರೀದಿಯಲ್ಲಿ 7 ಸಾವಿರ ರೂ.ವರೆಗಿನ ಬೃಹತ್ ರಿಯಾಯಿತಿ ಇದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಐಒಟಿ ವಿಭಾಗದಲ್ಲಿ, ರಿಯಲ್ ಮೀ ಬಡ್ಸ್ ಏರ್ ನಿಯೋ ರಿಯಾಯಿತಿ ದರ 1,999 ರೂ., ರಿಯಲ್ ಮೀ ಬಡ್ಸ್ ವೈರ್ಲೆಸ್ ಪ್ರೊ 3,199 ರೂ. ಮತ್ತು ರಿಯಲ್ ಮೀ ಬಡ್ಸ್ ಏರ್ ಪ್ರೊ 4,299 ರೂ.ಗೆ ಲಭ್ಯವಿದೆ. ಖರೀದಿದಾರರು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಬ್ಯಾಂಕ್ ಆಫರ್ಗಳನ್ನೂ ಪಡೆಯಬಹುದು. ಜೊತೆಗೆ ಫ್ಲಿಪ್‌ಕಾರ್ಟ್ ಮತ್ತು ರಿಯಲ್ ಮೀ.ಕಾಂನಲ್ಲಿ ಆಯ್ದ ಉತ್ಪನ್ನಗಳ ಮೇಲೆ 6 ತಿಂಗಳ ಯಾವುದೇ ವೆಚ್ಚವಿಲ್ಲದ ಇಎಂಐ ಪಡೆಯಬಹುದು.
ಇದನ್ನೂ ಓದಿ : ಕೋವಿಡ್ ಎಫೆಕ್ಟ್: ಇ-ಕಾಮರ್ಸ್ನಲ್ಲಿ ಶೇಕಡಾ 30 - 40ರಷ್ಟು ಬೆಳವಣಿಗೆ