ಕರ್ನಾಟಕ

karnataka

ETV Bharat / business

ನಿಜಾಮರ 308 ಕೋಟಿ ರೂ. ಯಾರಿಗೆ ಸೇರಿದ್ದು... ಭಾರತ ಅಥವಾ ಪಾಕಿಸ್ತಾನಕ್ಕಾ?

ಹೈದರಾಬಾದ್‌ ನಿಜಾಮರ ಸುಮಾರು ₹ 308.20 ಕೋಟಿ (35 ದಶಲಕ್ಷ ಪೌಂಡ್‌) ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂಗ್ಲೆಂಡ್​ನಲ್ಲಿ ಕಾನೂನು ಸಮರ ಹಲವು ದಶಕಗಳಿಂದ ನಡೆಯುತ್ತಿದೆ.

ಸಾಂದರ್ಭಿಕ ಚಿತ್ರ

By

Published : Jun 26, 2019, 9:07 PM IST

ಲಂಡನ್​: ಭಾರತ ಹಾಗೂ ಪಾಕಿಸ್ತಾನದ ನಡುವಿನ ದಶಕಗಳ ವಿವಾದಿತ ಹಣಕಾಸು ಸಂಬಂಧಿತ ವ್ಯಾಜ್ಯಯೊಂದು ನಿರ್ಣಾಕ ಘಟ್ಟದತ್ತ ಬಂದು ತಲುಪಿದೆ.

ಹೈದರಾಬಾದ್‌ ನಿಜಾಮರ ಸುಮಾರು ₹ 308.20 ಕೋಟಿ (35 ದಶಲಕ್ಷ ಪೌಂಡ್‌) ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂಗ್ಲೆಂಡ್​ನಲ್ಲಿ ಕಾನೂನು ಸಮರ ಹಲವು ದಶಕಗಳಿಂದ ನಡೆಯುತ್ತಿದೆ.

ಲಂಡನ್‌ನ ನ್ಯಾಯಾಲಯದಲ್ಲಿ 2 ವಾರಗಳ ಕಾಲ ನಡೆದ ವಿಚಾರಣೆ ಪೂರ್ಣಗೊಂಡಿದ್ದು, ಇನ್ನು 6 ವಾರದೊಳಗಾಗಿ ಅಂತಿಮ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿಜಾಮರ ವಂಶಸ್ಥರಾದ ಪ್ರಿನ್ಸ್‌ ಮುಕರ್ರಮ್‌ ಝಾ ಹಾಗೂ ಅವರ ಕಿರಿಯ ಸಹೋದರ ಮುಫ‌್ಫಖಾಮ್‌ ಝಾ ಈ ಕಾನೂನು ಸಮರದಲ್ಲಿ ಭಾರತದ ಜೊತೆ ಕೈ ಜೋಡಿಸಿದ್ದಾರೆ. ನಿಜಾಮರಿಗೆ ಸೇರಿದ್ದ ₹ 308.20 ಕೋಟಿ ಪ್ರಸ್ತುತ ಲಂಡನ್‌ನ ನ್ಯಾಟ್ವೆಸ್ಟ್‌ ಬ್ಯಾಂಕ್​ನಲ್ಲಿದೆ.

For All Latest Updates

TAGGED:

ABOUT THE AUTHOR

...view details