ನವದೆಹಲಿ: ಆದಾಯ ತೆರಿಗೆ ಇಲಾಖೆಯು 5 ಲಕ್ಷ ರೂ.ಗಳವರೆಗೆ ಬಾಕಿ ಇರುವ ಮರುಪಾವತಿಯನ್ನು ತಕ್ಷಣ ನೀಡುವುದಾಗಿ ತಿಳಿಸಿದ್ದು, ಇದರಿಂದ ಸುಮಾರು 14 ಲಕ್ಷ ತೆರಿಗೆದಾರರಿಗೆ ಲಾಭವಾಗಲಿದೆ.
5 ಲಕ್ಷ ರೂ. ತನಕ ತೆರಿಗೆದಾರರ ಬಾಕಿ ಪಾವತಿ... 14 ಲಕ್ಷ ಜನರಿಗೆ ಪ್ರಯೋಜನ
ಕೋವಿಡ್ -19 ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮತ್ತು ವ್ಯಾಪಾರ ಸಂಸ್ಥೆ/ವ್ಯಕ್ತಿಗಳಿಗೆ ತಕ್ಷಣವೇ ಪರಿಹಾರ ನೀಡುವ ಉದ್ದೇಶದಿಂದ ಬಾಕಿ ಇರುವ ಎಲ್ಲಾ ಆದಾಯ-ತೆರಿಗೆ ಮರುಪಾವತಿಗಳನ್ನು 5 ಲಕ್ಷ ರೂ.ವರೆಗೆ ತಕ್ಷಣ ವಿತರಿಸಲು ನಿರ್ಧರಿಸಲಾಗಿದೆ ಐಟಿ ಇಲಾಖೆ ಹೇಳಿದೆ.
ಐಟಿ ಇಲಾಖೆ
ಸರ್ಕಾರ, ವ್ಯಾಪಾರ ಸಂಸ್ಥೆಗಳಿಗೆ ಪರಿಹಾರ ಒದಗಿಸಲು ಬಾಕಿ ಇರಿಸಿಕೊಂಡಿದ್ದ ಜಿಎಸ್‌ಟಿ ಮೊತ್ತ ಮತ್ತು 18,000 ಕೋಟಿ ರೂ. ಕಸ್ಟಮ್ಸ್ ಅನ್ನು ಮರುಪಾವತಿ ಮಾಡಲಿದೆ.
ಕೋವಿಡ್ -19 ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮತ್ತು ವ್ಯಾಪಾರ ಸಂಸ್ಥೆ/ವ್ಯಕ್ತಿಗಳಿಗೆ ತಕ್ಷಣವೇ ಪರಿಹಾರ ನೀಡುವ ಉದ್ದೇಶದಿಂದ ಬಾಕಿ ಇರುವ ಎಲ್ಲಾ ಆದಾಯ-ತೆರಿಗೆ ಮರುಪಾವತಿಗಳನ್ನು 5 ಲಕ್ಷ ರೂ.ವರೆಗೆ ತಕ್ಷಣ ವಿತರಿಸಲು ನಿರ್ಧರಿಸಲಾಗಿದೆ. ಇದರಿಂದ ಸುಮಾರು 14 ಲಕ್ಷ ತೆರಿಗೆದಾರರಿಗೆ ಪ್ರಯೋಜನ ಆಗಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.