ಕರ್ನಾಟಕ

karnataka

ಅರುಣ್​ ಜೇಟ್ಲಿ ಪ್ರಥಮ ಪುಣ್ಯತಿಥಿಯಂದು ದೇಶದ ಜನತೆಗೆ ತೆರಿಗೆ ವಿನಾಯ್ತಿ ಗಿಫ್ಟ್​..!

By

Published : Aug 24, 2020, 3:12 PM IST

ಕೇಂದ್ರ ಸರ್ಕಾರದಿಂದ ಹೊಸ ಘೋಷಣೆ ಹೊರಬಿದ್ದಿದ್ದು, ವಾರ್ಷಿಕ 40 ಲಕ್ಷ ರೂಪಾಯಿಯವರೆಗೆ ವ್ಯಾಪಾರ, ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

ಜಿಎಸ್​ಟಿಯಿಂದ ವಿನಾಯಿತಿ ನೀಡಿದ ವಿತ್ತ ಸಚಿವಾಲಯ
ಜಿಎಸ್​ಟಿಯಿಂದ ವಿನಾಯಿತಿ ನೀಡಿದ ವಿತ್ತ ಸಚಿವಾಲಯ

ನವದೆಹಲಿ:ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೊದಲ ಪುಣ್ಯ ತಿಥಿಯಂದು ತೆರಿಗೆದಾರರು ಪಾವತಿಸಬೇಕಾದ ತೆರಿಗೆ ದರವನ್ನು ಕಡಿಮೆ ಮಾಡಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

ಜಿಎಸ್​​ಟಿ ಅನುಷ್ಠಾನದ ಆರಂಭಿಕ ಸಮಯದಲ್ಲಿ ಸುಮಾರು 65 ಮೌಲ್ಯ ಮಾಪಕರಿದ್ದರು. ಈಗ ಆ ಮೌಲ್ಯಮಾಪಕರ ಸಂಖ್ಯೆ 1.24 ಕೋಟಿಗೂ ಹೆಚ್ಚಾಗಿದೆ.

ಜೇಟ್ಲಿಯವರ ಮೊದಲ ಪುಣ್ಯ ತಿಥಿಗೆ ವಿತ್ತ ಸಚಿವಾಲಯವು ಸರಕು ಮತ್ತು ಸೇವಾ ತೆರಿಗೆಗೆಗೂ ಮೊದಲು ಮೌಲ್ಯವರ್ಧಿತ ತೆರಿಗೆ (ವ್ಯಾಟ್), ಅಬಕಾರಿ, ಮಾರಾಟ ತೆರಿಗೆ ಮತ್ತು ಅವುಗಳ ಕ್ಯಾಸ್ಕೇಡಿಂಗ್ ಪರಿಣಾಮದ ಸಂಯೋಜನೆಯಾ ಶೇ 31ರಷ್ಟರ ತನಕ ಇದ್ದಿತ್ತು ಎಂದು ಸರಣಿ ಟ್ವೀಟ್​​ನಲ್ಲಿ ತಿಳಿಸಿದೆ.

ಜನರು ತೆರಿಗೆ ಪಾವತಿಸಬೇಕಾದ ದರದ ಜಿಎಸ್​​ಟಿಯನ್ನು ಕಡಿಮೆ ಮಾಡಲಾಗಿದೆ. ಆರ್‌ಎನ್‌ಆರ್ (ಕಂದಾಯ ತಟಸ್ಥ ದರ) ಸಮಿತಿಯ ಪ್ರಕಾರ ಆದಾಯ ತಟಸ್ಥ ದರ ಶೇ 15.3ರಷ್ಟಕ್ಕೆ ಹೋಲಿಸಿದರೆ, ಆರ್‌ಬಿಐ ಪ್ರಕಾರ, ಪ್ರಸ್ತುತ ತೂಕದ ಜಿಎಸ್‌ಟಿ ದರ ಕೇವಲ ಶೇ 11.6ರಷ್ಟು ಮಾತ್ರವಿದೆ ಎಂದು ಸಚಿವಾಲಯ ಹೇಳಿದೆ.

ವಾರ್ಷಿಕ ವಹಿವಾಟು ₹ 40 ಲಕ್ಷದವರೆಗೆ ಇರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ. ಆರಂಭದಲ್ಲಿ ಈ ಮಿತಿಯು ₹ 20 ಲಕ್ಷದಷ್ಟಿತ್ತು. ಈಗ ಹೆಚ್ಚುವರಿಯಾಗಿ ₹ 1.5 ಕೋಟಿ ವರೆಗಿನ ವಹಿವಾಟು ಹೊಂದಿರುವವರು ಸಂಯೋಜನೆ ಯೋಜನಾ ತೆರಿಗೆ ಆಯ್ದುಕೊಳ್ಳಬಹುದು. ಅದು ಕೇವಲ 1 ಪ್ರತಿತದಷ್ಟು ತೆರಿಗೆ ಪಾವತಿಸಬಹುದು ಎಂದಿದೆ.

ಜಿಎಸ್​ಟಿ ಜಾರಿಗೆ ಬಂದ ನಂತರ ಬಹುತೇಕ ವಸ್ತುಗಳ ಮೇಲಿನ ತೆರಿಗೆ ದರವನ್ನು ತಗ್ಗಿಸಲಾಯಿತು. ಈಗಿನ ಶೇ 28ರಷ್ಟು ಸ್ಲ್ಯಾಬ್​ ದರವು ಐಷಾರಾಮಿ ವಸ್ತುಗಳಿಗೆ ಮಾತ್ರ ಸೀಮಿತವಾಗಿದೆ. ಶೇ 28ರಷ್ಟು ಸ್ಲ್ಯಾಬ್‌ನಲ್ಲಿರುವ ಒಟ್ಟು 230 ವಸ್ತುಗಳ ಪೈಕಿ ಸುಮಾರು 200 ವಸ್ತುಗಳನ್ನು ಕೆಳಹಂತಕ್ಕೆ ವರ್ಗಾಯಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ವಸತಿ ವಲಯದ ತೆರಿಗೆ ಸ್ಲ್ಯಾಬ್ ದರ ಶೇ 5ರಲ್ಲಿ ಇರಿಸಲಾಗಿದ್ದು, ಕೈಗೆಟುಕುವ ವಸತಿ ಮೇಲಿನ ಜಿಎಸ್‌ಟಿಯನ್ನು ಶೇ 1ರಷ್ಟಕ್ಕೆ ಇಳಿಸಲಾಗಿದೆ ಎಂದು ತಿಳಿಸಿದೆ.

ABOUT THE AUTHOR

...view details