ನವದೆಹಲಿ: ಕೋವಿಡ್ 19 ಮಹಾಮಾರಿಗೆ ಸಿಲುಕಿರುವ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ನೇರ ತೆರಿಗೆ ಮಂಡಳಿ (CBDT) ಕೊಂಚ ರಿಲೀಫ್ ನೀಡಿದೆ. ತೆರಿಗೆ ಪಾವತಿದಾರರ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, 5 ಲಕ್ಷದವರೆಗೆ ತೆರಿಗೆ ಮರುಪಾವತಿ ಹಣ ಪಡೆಯುವ ತೆರಿಗೆದಾರರಿಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ವರದಾನವಾಗಲಿದೆ.
ಆದಾಯ ತೆರಿಗೆ ಪಾವತಿಸಿದವರಿಗೆ ಸಿಹಿ ಸುದ್ದಿ: ಐಟಿಯಿಂದ 4,250 ಕೋಟಿ ಮರುಪಾವತಿ - ಕೋವಿಡ್ 19
ತೆರಿಗೆ ಪಾವತಿದಾರರ ಬಾಕಿ ಹಣವನ್ನು ಕೇಂದ್ರ ನೇರ ತೆರಿಗೆ ಮಂಡಳಿ ಬಿಡುಗಡೆ ಮಾಡಿದ್ದು, ಇದೊಂದೇ ವಾರದಲ್ಲಿ 1.75 ಲಕ್ಷ ಮಂದಿ ತೆರಿಗೆ ಮರುಪಾವತಿ ಹಣವನ್ನು ಪಡೆಯಲಿದ್ದಾರೆ.
ಏಪ್ರಿಲ್ 14ರ ವೇಳೆಗೆ ಸಿಬಿಡಿಟಿ ಈಗಾಗಲೇ 10.2 ಲಕ್ಷ ತೆರಿಗೆದಾರರ 4 ಸಾವಿರದ 250 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಿದೆ. ಇದೊಂದೇ ವಾರದಲ್ಲಿ 1.75 ಲಕ್ಷ ಮಂದಿ ತೆರಿಗೆಯ ಮರುಪಾವತಿ ಹಣವನ್ನು ಪಡೆಯಲಿದ್ದಾರೆ. ಮುಂದಿನ 5-7 ವ್ಯವಹಾರದ ದಿನಗಳಲ್ಲಿ ಮರುಪಾವತಿಯ ಹಣ ನೇರವಾಗಿ ತೆರಿಗೆದಾರರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಿಬಿಡಿಟಿ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ.
ತೆರಿಗೆ ಪಾವತಿ ಮಾಡಿದವರೊಂದಿಗೆ ಸಮನ್ವಯತೆ ಸಾಧಿಸುವ ಸಂಬಂಧ ಸುಮಾರು 1.74 ಲಕ್ಷ ಮಂದಿಗೆ ಇ-ಮೇಲ್ ಸಂದೇಶ ಕಳುಹಿಸಲಾಗಿದ್ದು, ಇದಕ್ಕೆ 7 ದಿನಗಳೊಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ಇವರಿಗೂ ಹಂತ ಹಂತವಾಗಿ ತೆರಿಗೆ ಮರುಪಾವತಿಯ ಹಣವನ್ನು ನೀಡುವುದಾಗಿ ಸಿಬಿಡಿಬಿ ತಿಳಿಸಿದೆ. ಬ್ಯಾಂಕ್ ಖಾತ್ರಿ, ಹೊಂದಾಣಿಕೆಯಾಗದಂತಹ ಸಮಸ್ಯೆಗಳು ಇದ್ದರೆ ಮರುಪಾವತಿಯ ಹಣ ಪಡೆಯುವ ಮುನ್ನವೇ ಸರಿ ಪಡಿಸಿಕೊಳ್ಳುವಂತೆ ಸಂದೇಶದಲ್ಲೇ ಎಚ್ಚರಿಸಲಾಗಿದೆ.