ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,202 ರೂಪಾಯಿ ಏರಿಕೆ ಕಂಡಿದ್ದು, 51,889 ರೂಪಾಯಿಗಳಿಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ.
ಹಿಂದಿನ ದಿನ ಚಿನ್ನದ ಬೆಲೆ 10 ಗ್ರಾಮ್ಗೆ 50,687 ರೂಪಾಯಿ ಇತ್ತು. ಇದರ ಜೊತೆಗೆ ಬೆಳ್ಳಿಯ ಬೆಲೆ ಕೂಡಾ ಜಾಸ್ತಿಯಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ 2,148 ರೂಪಾಯಿಯಷ್ಟು ಏರಿಕೆ ಕಂಡಿದೆ. ಈಗ ಒಂದು ಕೆಜಿ ಬೆಳ್ಳಿಯ ಬೆಲೆ 67,956 ರೂಪಾಯಿ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 65,808 ರೂಪಾಯಿ ಇತ್ತು.
ಭಾರತದ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಸುಮಾರು 49 ಪೈಸೆಯಷ್ಟು ಭಾರತೀಯ ರೂಪಾಯಿ ಮೌಲ್ಯ ಕುಸಿದಿದ್ದು, ಈಗ ಒಂದು ಅಮೆರಿಕನ್ ಡಾಲರ್ನ ಮೌಲ್ಯ 75.82 ರೂಪಾಯಿಯಷ್ಟಾಗಿದೆ.