ಪುಣೆ:ಭಾರತದಲ್ಲಿ ಉತ್ಪಾದಿತ ಲಸಿಕೆಗಳನ್ನು ದೇಶವಾಸಿಗಳನ್ನು ಕಡೆಗಣಿಸಿ ವಿದೇಶಗಳಿಗೆ ರಫ್ತು ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪದ ನಡುವೆ, ವ್ಯಾಕ್ಸಿನ್ ಸಾಗಣೆಯ ಮಹತ್ವದ ಅಂಶ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಮೂಲಕ ಬಹಿರಂಗವಾಗಿದೆ.
ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರಫುಲ್ ಸರ್ದಾ ಎಂಬುವವರು ವಿದೇಶಾಂಗ ಸಚಿವಾಲಯಕ್ಕೆ ಲಸಿಕೆ ರಫ್ತಿನ ವಿವರ ಕೋರಿ ಆರ್ಟಿಐ ಅರ್ಜಿ ಹಾಕಲಾಗಿತ್ತು. ಮಾರ್ಚ್ 5ರ ತನಕ ನಾನಾ ವಿಭಾಗದಡಿ 95 ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ ಎಂದು ಸರ್ದಾ ಅರ್ಜಿಗೆ ಮಾಹಿತಿ ನೀಡಲಾಗಿದೆ.
ಒಂದು ಪ್ರಶ್ನೆಗೆ, ದೇಶೀಯ ಉತ್ಪಾದನೆ ಮತ್ತು ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮದ ಅವಶ್ಯಕತೆಗಳನ್ನು ಗಮನದಲ್ಲಿ ಇರಿಸಿಕೊಂಡು, ಭವಿಷ್ಯದಲ್ಲಿ ಸರಬರಾಜು (ರಫ್ತು) ಕೈಗೊಳ್ಳಲಾಗುವುದು ಎಂದು ಎಂಇಎ ಸ್ಪಷ್ಟಪಡಿಸಿದೆ.
ಲಸಿಕೆಗಳ ರಫ್ತು ವಿವರಗಳನ್ನು ಐಎಎನ್‌ಎಸ್ ಮೊದಲ ಬಾರಿಗೆ ಏಪ್ರಿಲ್ 27ರಂದು ವರದಿ ಮಾಡಿತ್ತು. ಇದು ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್, ಆಪ್, ಶಿವಸೇನಾ, ಎಡಪಕ್ಷಗಳು ಸೇರಿದಂತೆ ಹಲವು ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಮುಗಿಬಿದ್ದವು. ಪ್ರಧಾನಿ ಮೋದಿ ಹಾಗೂ ಬಿಜೆಪಿಯಿಂದ ಸ್ಪಷ್ಟನೆ ಬಯಿಸಿ ನಿರಂತರ ಟೀಕೆಗೆ ಒಳಪಡಿಸಿದವು.
ಮೂಲ ರಫ್ತು ದತ್ತಾಂಶ ಹೊರತುಪಡಿಸಿ, ಸರ್ಕಾರವು ಇತರ ಅನೇಕ ಸಂಬಂಧಿತ ಮಾಹಿತಿಗಳನ್ನು ಗಮನದಲ್ಲಿ ಇರಿಸಿಕೊಂಡಿದೆ. ಆದರೆ ಭಾರತೀಯರನ್ನು ದೊಡ್ಡ ಪ್ರಮಾಣದಲ್ಲಿ ವಂಚಿತಗೊಳಿಸಿದ ಇಷ್ಟು ದೊಡ್ಡ ಪ್ರಮಾಣದ ಡೋಸ್‌ಗಳ ರಫ್ತು ಮಾಡುವು ಅವಶ್ಯಕತೆ ಏನಿತ್ತು ಎಂದು ಸರ್ದಾ ಪ್ರಶ್ನಿಸಿದರು.