ಕರ್ನಾಟಕ

karnataka

ಐಟಿ ರಿಟರ್ನ್ಸ್, ಆಧಾರ್-ಪ್ಯಾನ್ ಕಾರ್ಡ್​​ ಜೋಡಣೆ ಮರೆಯದಿರಿ

By

Published : Mar 11, 2022, 11:28 AM IST

ಆರ್ಥಿಕ ವರ್ಷದ ಕೊನೆಯ ದಿನಗಳು ಆಗಿದ್ದರಿಂದ ಕೆವೈಸಿ ಬಗ್ಗೆ ಬ್ಯಾಂಕ್​ ದೂರವಾಣಿ ಕರೆಗಳನ್ನು ಹೊರತು ಪಡಿಸಿ ಯಾವುದೇ ಕರೆ ಬಂದರೆ ಅದನ್ನು ಖಚಿತ ಪಡಿಸಿಕೊಂಡು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಹೋಗಿ ವಿವರಗಳನ್ನು ಸಲ್ಲಿಸುವುದು ಉತ್ತಮ..

IT returns
IT returns

ಹೈದ್ರಾಬಾದ್​ :ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯದ ಹಂತಕ್ಕೆ ಬಂದಿದೆ. ಆದಾಯ ತೆರಿಗೆ ಸೇರಿದಂತೆ ಹಣಕಾಸಿನ ವಿಚಾರಗಳನ್ನು ಮರೆಯುತ್ತಿಲ್ಲ. ಅದರಲ್ಲೂ ತೆರಿಗೆ ಉಳಿತಾಯದಲ್ಲಿ ಎಚ್ಚರಿಕೆ ಕ್ರಮವನ್ನು ವಹಿಸಬೇಕಾಗುತ್ತದೆ. ಹಾಗಾದರೆ, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಮಾಡಬೇಕಾದ ಕೆಲ ಪ್ರಮುಖ ಕೆಲಸಗಳು ಇವು.

2020-21ರ ಆರ್ಥಿಕ ವರ್ಷಕ್ಕೆ ಐಟಿ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31ಕ್ಕೆ ಕೊನೆಯ ದಿನವಾಗಿದೆ. ಇದರ ನಂತರ ಐಟಿ ರಿಟರ್ನ್ಸ್ ಸಲ್ಲಿಸಲು ಸಾಧ್ಯವಿಲ್ಲ. ಇನ್ನು, ಆಡಿಟ್ ವ್ಯಾಪ್ತಿಗೆ ಒಳಪಡುವವರು ಮಾರ್ಚ್ 15ರೊಳಗೆ ತಮ್ಮ ರಿಟರ್ನ್ಸ್ ಸಲ್ಲಿಸಬೇಕು.

ಪ್ರಸಕ್ತ ಹಣಕಾಸು ವರ್ಷದ ಒಟ್ಟು ಆದಾಯ ಎಷ್ಟು ಮತ್ತು ತೆರಿಗೆ ಕಡಿತದ ಬಗ್ಗೆ ನೀವು ಯೋಚಿಸಬೇಕು. ಜತೆಗೆ ನೀವು ಎಷ್ಟು ತೆರಿಗೆ ಪಾವತಿಸಬೇಕೆಂಬ ಬಗ್ಗೆಯೂ ಲೆಕ್ಕ ಹಾಕಬೇಕು. ಸೆಕ್ಷನ್-C 80C ಅಡಿಯಲ್ಲಿ ಬರುವ ಎಲ್ಲ ವಿನಾಯಿತಿಗಳನ್ನು ಬಳಸಿದ್ದೀರಾ ಎಂಬುದನ್ನು ಪರಿಶೀಲಿಸಬೇಕು. ವಿನಾಯಿತಿಗಳನ್ನ ಪಡೆದುಕೊಳ್ಳುವ ಕುರಿತು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಮತ್ತು ಷೇರಿಗೆ ಸಂಬಂಧಿಸಿದ ಉಳಿತಾಯ (ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್-ಇಎಲ್‌ಎಸ್‌ಎಸ್) ದಂತಹ ವಿವಿಧ ಯೋಜನೆಗಳಲ್ಲಿ ಹಣ ಜಮೆ, ಹೂಡಿಕೆಗೂ ಅವಕಾಶವಿದೆ. ಒಂದು ವೇಳೆ ನೀವು ಈಗಾಗಲೇ ಯಾವುದೇ ಸ್ಕೀಮ್​ನಲ್ಲಿ ಹಣ ತುಂಬುತ್ತಿದ್ದರೆ, ಮಾರ್ಚ್ 31ರೊಳಗೆ ತುಂಬಬೇಕು.

ಮುಖ್ಯವಾಗಿ ಆಧಾರ್ ಕಾರ್ಡ್​​ ಮತ್ತು ಪ್ಯಾನ್ ಕಾರ್ಡ್​​ ಜೋಡಣೆ ಮಾಡುವುದನ್ನು ಮರೆಯಬೇಡಿ. ಪ್ಯಾನ್​ ಕಾರ್ಡ್​​ ಅವಧಿ ಮುಗಿದರೆ ಅದು ಅಮಾನ್ಯವಾಗುವ ಸಾಧ್ಯತೆ ಇರುತ್ತದೆ. ಇದರಿಂದ ಹಣಕಾಸಿನ ವಹಿವಾಟು ನಡೆಸಲು ಕಷ್ಟವಾಗುತ್ತದೆ. ಬ್ಯಾಂಕ್​ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ಯಾನ್, ಆಧಾರ್ ಮತ್ತು ವಿಳಾಸ ಪರಿಶೀಲನೆ ಮತ್ತು ಬ್ಯಾಂಕ್​ನವರು ಕೇಳುವ ವಿವರಗಳನ್ನು ಮಾ.31ರೊಳಗೆ ಸಲ್ಲಿಸುವುದು ಸೂಕ್ತ.

ಆರ್ಥಿಕ ವರ್ಷದ ಕೊನೆಯ ದಿನಗಳು ಆಗಿದ್ದರಿಂದ ಕೆವೈಸಿ ಬಗ್ಗೆ ಬ್ಯಾಂಕ್​ ದೂರವಾಣಿ ಕರೆಗಳನ್ನು ಹೊರತು ಪಡಿಸಿ ಯಾವುದೇ ಕರೆ ಬಂದರೆ ಅದನ್ನು ಖಚಿತ ಪಡಿಸಿಕೊಂಡು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಹೋಗಿ ವಿವರಗಳನ್ನು ಸಲ್ಲಿಸುವುದು ಉತ್ತಮ.

ABOUT THE AUTHOR

...view details