ನವದೆಹಲಿ: ಪೆಟ್ರೋಲಿಯಂ, ಇಂಜಿನಿಯರಿಂಗ್, ರಾಸಾಯನಿಕ ಮತ್ತು ರತ್ನಾಭರಣಗಳಂತಹ ಪ್ರಮುಖ ಕ್ಷೇತ್ರಗಳ ಸಾಗಣೆಯಲ್ಲಿನ ಸಂಕೋಚನದ ಕಾರಣ ದೇಶದ ರಫ್ತು ವಹಿವಾಟು ನವೆಂಬರ್‌ನಲ್ಲಿ ಶೇ 8.74ರಷ್ಟು ಇಳಿದು 23.52 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅಧಿಕೃತ ಅಂಕಿ - ಅಂಶಗಳು ತಿಳಿಸಿವೆ.
ಆಮದು ಕೂಡ ಶೇ 13.32ರಷ್ಟು ಇಳಿಕೆಯಾಗಿದ್ದು, 33.39 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ತಿಂಗಳಿನಲ್ಲಿ ವ್ಯಾಪಾರ ಕೊರತೆ 9.87 ಬಿಲಿಯನ್ ಡಾಲರ್‌ಗೆ ಇಳಿದಿದೆ.
ಏಪ್ರಿಲ್ - ನವೆಂಬರ್ 2020-21ರ ಅವಧಿಯಲ್ಲಿ ರಫ್ತು ಶೇ 17.76ರಷ್ಟು ಇಳಿದು 173.66 ಶತಕೋಟಿ ಡಾಲರ್‌ಗೆ ತಲುಪಿದ್ದರೆ, ಆಮದು ಶೇ 33.55ರಷ್ಟು ಕುಸಿದು 215.69 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಷೇರು ವ್ಯವಹಾರ ಮಾಡ್ತಿರಾ? 2021ರ ಅಂತ್ಯಕ್ಕೆ ಸೆನ್ಸೆಕ್ಸ್ 50,500 ಅಂಕಗಳ ಮಟ್ಟಕ್ಕೆ ಏರಿಕೆ!
ಹಣಕಾಸಿನ ಕೊರತೆಯು ಮೊದಲ ಎಂಟು ತಿಂಗಳಲ್ಲಿ 42 ಬಿಲಿಯನ್ ಯುಎಸ್ ಡಾಲರ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 113.42 ಬಿಲಿಯನ್ ಡಾಲರ್ ಆಗಿತ್ತು. ನವೆಂಬರ್‌ನಲ್ಲಿ ತೈಲ ಆಮದು ಶೇ 43.36ರಷ್ಟು ಇಳಿದು 6.27 ಬಿಲಿಯನ್ ಡಾಲರ್‌ಗೆ ತಲುಪಿದೆ.