ಮುಂಬೈ: ವಾರಾಂತ್ಯದ ಬಳಿಕ ಇಂದಿನ ಆರಂಭಿಕ ವಹಿವಾಟಿನಲ್ಲೇ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಕುಸಿತ ಕಂಡಿವೆ.
300 ಅಂಕಗಳ ಕುಸಿತದಿಂದ ಸೆನ್ಸೆಕ್ಸ್ 60,504.75 ಪಾಯಿಂಟ್ಸ್ಗೆ ಇಳಿಕೆ ಕಂಡಿದ್ದು, ರಾಷ್ಟ್ರೀಯ ಸಂವೇದನಾ ಸೂಚ್ಯಂಕ ನಿಫ್ಟಿ 125.50 ಅಂಕಗಳ ಇಳಿಕೆಯೊಂದಿಗೆ 18,114.90 ಪಾಯಿಂಟ್ಸ್ನೊಂದಿಗೆ ವಹಿವಾಟು ನಡೆಸುತ್ತಿದೆ.