ವಿಶ್ವ ಬ್ಯಾಂಕ್ ಬಿಡುಗಡೆ ಮಾಡುವ ವಾರ್ಷಿಕ ಈಜಿ ಡೂಯಿಂಗ್ ಬ್ಯುಸಿನೆಸ್( ಸುಲಲಿತ ವ್ಯಾಪಾರ ಪಟ್ಟಿ) ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಭಾರತವು 14 ಸ್ಥಾನ ಏರಿಕೆ ಕಂಡು 63ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಕಳೆದ ವರ್ಷ 77 ಸ್ಥಾನದಲ್ಲಿದ್ದ ಭಾರತ ಈ ವರ್ಷ 63ನೇ ಸ್ಥಾನಕ್ಕೆ ಜಿಗಿದಿದೆ.
ಇನ್ನು ಈ ಬಾರಿಯೂ ಈಜಿ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯ ಪ್ರಮುಖ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ. ಇದನ್ನು ಸೇರಿ ಒಟ್ಟು ಮೂರು ಬಾರಿ ಟಾಪ್ ಟೆನ್ ಪಟ್ಟಿಯಲ್ಲಿ ಭಾರತ ಸೇರ್ಪಡೆಯಾಗಿದೆ.
ಈಜಿ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ವರ್ಲ್ಡ್ ಬ್ಯಾಂಕ್, ಐಎಂಎಫ್ ಮತ್ತು ಹಲವಾರು ರೇಟಿಂಗ್ ಏಜೆನ್ಸಿಗಳು ಸೇರಿಕೊಂಡು ಸಿದ್ಧ ಪಡಿಸುತ್ತವೆ. ಈ ಪಟ್ಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿವೆ ಎಂಬುದು ತಿಳಿಯುತ್ತದೆ.
2014ರಲ್ಲಿ ಭಾರತವು 190 ದೇಶಗಳಲ್ಲಿ 142ನೇ ಸ್ಥಾನದಲ್ಲಿತ್ತು. 2017ರಲ್ಲಿ 130ಕ್ಕೆ ಏರಿಕೆಯಾಯಿತು. ಇನ್ನು ಕಳೆದ ವರ್ಷ ಒಂದೇ ಬಾರಿ 23 ಸ್ಥಾನಗಳಲ್ಲಿ ಮೇಲೇರಿತು.
ಈ ಪಟ್ಟಿಯಲ್ಲಿ ಸ್ಥಾನಗಳನ್ನು ಗಿಟ್ಟಿಸಿಕೊಂಡರೆ ಅಂತಾರಾಷ್ಟ್ರೀಯ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲು ಸಹಕಾರಿಯಾಗುತ್ತದೆ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರುತ್ತವೆ. ಡೂಯಿಂಗ್ ಬ್ಯುಸಿನೆಸ್ನಲ್ಲಿ ಭಾರತವು ಉನ್ನತ ಮಟ್ಟಕ್ಕೆ ಬರಲು, ಮುಂಬೈ, ಬೆಂಗಳೂರು, ಕೊಲ್ಕತ್ತಾ ಸೇರಿದಂತೆ ದೊಡ್ಡ ದೊಡ್ಡ ನಗರಗಳ ಪಾತ್ರ ಹಿರಿದಾಗಿದೆ. ಅಲ್ಲದೆ ಮೋದಿ ತಂದ 'ಮೇಕಿಂಗ್ ಇಂಡಿಯಾ' ಕೂಡ ಇದಕ್ಕೆ ಹೆಗಲು ಕೊಟ್ಟಿದೆ.