ನವದೆಹಲಿ:ಲಾಕ್‌ಡೌನ್‌ನಿಂದಾಗಿ ಆ್ಯಪ್ ಆಧಾರಿತ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೋ ಇತ್ತೀಚೆಗಷ್ಟೇ 600 ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಫುಡ್ ಡೆಲಿವರಿ ಮಾಡುವ ಸ್ವಿಗ್ಗಿ ತನ್ನ ಸಂಸ್ಥೆಯ 1,100 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಆ ಮೂಲಕ ಕಂಪನಿಯ ಶೇಕಡಾ 14 ರಷ್ಟು ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಕೆಲಸ ಕಳೆದುಕೊಳ್ಳಲಿರುವ ಎಲ್ಲ ಉದ್ಯೋಗಿಗಳಿಗೆ ನೋಟಿಸ್ ಅವಧಿಯಲ್ಲಿ 3 ತಿಂಗಳ ಸಂಬಳ ನೀಡಲಾಗುತ್ತದೆ ಎಂದು ಸ್ವಿಗ್ಗಿಯ ಸಹ ಸಂಸ್ಥಾಪಕ ಮತ್ತು ಸಿಇಒ ಶ್ರೀಹರ್ಷ ಮಜೇಟಿ ಹೇಳಿದ್ದಾರೆ.