ಕರ್ನಾಟಕ

karnataka

ETV Bharat / business

ವಾಣಿಜ್ಯ ತೆರಿಗೆ ಇಲಾಖೆಗೆ ಮೇಜರ್ ಸರ್ಜರಿ: ಸಾಮೂಹಿಕ ವರ್ಗಾವಣೆ ಜೊತೆ ಮುಂಬಡ್ತಿ - ಸರ್ಕಾರಿ ಅಧಿಕಾರಿಗಳ ವರ್ಗಾವಣೆ

ರಾಜ್ಯ ಸರ್ಕಾರವು 99 ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಿಗೆ ಉಪ ಆಯುಕ್ತರ ವೃಂದಕ್ಕೆ ಮುಂಬಡ್ತಿ ನೀಡಿ ‌ವರ್ಗಾವಣೆ ಮಾಡಿದೆ. 72 ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರನ್ನು ಉಪ ಆಯುಕ್ತರಾಗಿ ಮುಂಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಲಾಗಿದೆ.

VS
ವಿಧಾನಸೌಧ

By

Published : Dec 9, 2020, 3:40 AM IST

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಗೆ ಸರ್ಕಾರ‌ ಮೇಜರ್ ಸರ್ಜರಿಗೆ ಮುಂದಾಗಿದ್ದು, ಸಾಮೂಹಿಕ ವರ್ಗಾವಣೆ ಹಾಗೂ‌‌ ಕೆಲವರಿಗೆ ಮುಂಬಡ್ತಿ ನೀಡಿ ವರ್ಗಾವಣೆಯ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರವು 99 ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಿಗೆ ಉಪ ಆಯುಕ್ತರ ವೃಂದಕ್ಕೆ ಮುಂಬಡ್ತಿ ನೀಡಿ ‌ವರ್ಗಾವಣೆ ಮಾಡಿದೆ. 72 ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರನ್ನು ಉಪ ಆಯುಕ್ತರಾಗಿ ಮುಂಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಲಾಗಿದೆ.

2021ರಲ್ಲಿ ಜಿಯೋ 5ಜಿ ಸೇವೆ ಪ್ರಾರಂಭಿಸುವ ಯೋಜನೆ: ಮುಖೇಶ್ ಅಂಬಾನಿ

27 ವಾಣಿಜ್ಯ ತೆರಿಗೆ ಉಪ ಆಯುಕ್ತರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ 37 ವಾಣಿಜ್ಯ ತೆರಿಗೆ ಪರಿವೀಕ್ಷಕರನ್ನು ವರ್ಗಾವಣೆಗೊಳಿಸಲಾಗಿದೆ. ಇನ್ನು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರಾಗಿ ಕಾರ್ಯನಿರ್ವಾಹಿಸುತ್ತಿದ್ದ ಶಿವಪ್ರಕಾಶ್ ಸಿ.ಎನ್ ಮತ್ತು ಸಿ.ಪುಷ್ಪಲತಾ ಅವರನ್ನು ಅಪರ ಆಯುಕ್ತರಾಗಿ ಮುಂಬಡ್ತಿ ನೀಡಲಾಗಿದೆ. ಅಪರ ಆಯುಕ್ತರಾದ ರವಿ ಜೇಸುರಾಜ್ ಮತ್ತು ಸತ್ಯ ಪ್ರಕಾಶ್ ಎಂಬವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆ ಮೂಲಕ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.

ABOUT THE AUTHOR

...view details