ನವದೆಹಲಿ:ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ದೇಶದೆಲ್ಲೆಡೆ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಭಾರತ ಸರ್ಕಾರ ಸೋಮವಾರ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದ 59 ಆ್ಯಪ್ಗಳನ್ನು ಬ್ಯಾನ್ ಮಾಡಿ ಆದೇಶ ನೀಡಿದೆ. ಆದರೂ ಹಲವಾರು ಜನಪ್ರಿಯ ಆ್ಯಪ್ಗಳು ಈ ಪಟ್ಟಿಯಲ್ಲಿಲ್ಲ.
ಭಾರತದಲ್ಲಿ ಬ್ಯಾನ್ ಆಗದ ಚೀನಾ ಆ್ಯಪ್ಗಳು:
- ಪಬ್‌ಜಿ ಮೊಬೈಲ್ (PUBG Mobile)
- ಎಂವಿ ಮಾಸ್ಟರ್ (MV Master)
- ಅಲಿ ಎಕ್ಸ್ಪ್ರೆಸ್ ( AliExpress)
- ಟರ್ಬೊ ವಿಪಿಎನ್ (TurboVPN)
- ಡೊಮೊಬೈಲ್ನ ಆ್ಯಪ್ಲಾಕ್ (App Lock by DoMobile)
- ರೋಜ್ ಬುಜ್ ವಿ ಮೀಡಿಯಾ (Rozz Buzz we media)
- 360 ಸೆಕ್ಯುರಿಟಿ ( 360 Security)
- ಆ್ಯಪ್ಲಾಕ್ಸ್ (App locks)
- ನೊನೊ ಲೈವ್ (Nono live)
- ಗೇಮ್ ಆಫ್ ಸುಲ್ತಾನ್ಸ್ (Game of Sultans)
- ಮಾಫಿಯಾ ಸಿಟಿ (Mafia City)
- ಬ್ಯಾಟಲ್ ಆಫ್ ಎಂಪೈರ್ಸ್ (Battle of Empires)
ಭಾರತದ ಸಾರ್ವಭೌಮತ್ವ, ರಕ್ಷಣೆ, ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ 59 ಆ್ಯಪ್ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಪಷ್ಟನೆ ನೀಡಿದೆ.