ಕರ್ನಾಟಕ

karnataka

ETV Bharat / business

ಕೋಳಿ ತಿಂದ್ರೆ ಕೊರೊನಾ ಬರುತ್ತಾ..? ಕೇಂದ್ರ ಪಶುಸಂಗೋಪನಾ ಸಚಿವಾಲಯದ ಸ್ಪಷ್ಟನೆ ಹೀಗಿದೆ

ಪಶುಸಂಗೋಪನಾ ಸಚಿವಾಲಯದ ಆಯುಕ್ತ ಪ್ರವೀಣ್ ಮಲಿಕ್ ಅವರು ಪೌಲ್ಟ್ರಿ ಫೆಡರೇಷನ್ ಆಫ್ ಇಂಡಿಯಾ ಸಲಹೆಗಾರ ವಿಜಯ್ ಸರ್ದಾನಾ ಅವರಿಗೆ ಬರೆದ ಪತ್ರದಲ್ಲಿ, 'ಜಾಗತಿಕವಾಗಿ ಯಾವುದೇ ವರದಿಯಲ್ಲಿ 2019 ಎನ್‌ಕೋವ್ (nCov ನೊವೆಲಾ ಕೊರೊನಾ) ವೈರಾಣು ಮಾನವರಿಗೆ ಹರಡುವಲ್ಲಿ ಕೋಳಿಯ ಪಾತ್ರವಿಲ್ಲ' ಎಂಬುದು ತಿಳಿದುಬಂದಿದೆ ಎಂದು ಉಲ್ಲೇಖಿಸಿದ್ದಾರೆ.

Chicken
ಕೋಳಿ

By

Published : Feb 11, 2020, 4:37 PM IST

ನವದೆಹಲಿ: ಚೀನಾದಲ್ಲಿ 900ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್ ಕೋಳಿಯಿಂದ ಹರಡುವುದಿಲ್ಲ ಎಂದು ಕೇಂದ್ರ ಪಶುಸಂಗೋಪನಾ ಸಚಿವಾಲಯ ಸ್ಪಷ್ಟಪಡಿಸಿದೆ.

ಯಾವುದೇ ಜಾಗತಿಕ ವರದಿಗಳಲ್ಲಿ ಈ ವಿಷಯ ಈ ಕುರಿತು ಖಚಿತತೆ ಇಲ್ಲದ ಕಾರಣ ಚಿಕನ್ ತಿನ್ನುವುದು ಸುರಕ್ಷಿತ ಎಂದು ಸಚಿವಾಲಯ ತಿಳಿಸಿದೆ.

ಪಶುಸಂಗೋಪನಾ ಸಚಿವಾಲಯದ ಆಯುಕ್ತ ಪ್ರವೀಣ್ ಮಲಿಕ್ ಅವರು ಪೌಲ್ಟ್ರಿ ಫೆಡರೇಷನ್ ಆಫ್ ಇಂಡಿಯಾ ಸಲಹೆಗಾರ ವಿಜಯ್ ಸರ್ದಾನಾ ಅವರಿಗೆ ಬರೆದ ಪತ್ರದಲ್ಲಿ, 'ಜಾಗತಿಕವಾಗಿ ಯಾವುದೇ ವರದಿಯಲ್ಲಿ 2019 ಎನ್‌ಕೋವ್ (nCov ನೊವೆಲಾ ಕೊರೊನಾ) ವೈರಾಣು ಮಾನವರಿಗೆ ಹರಡುವಲ್ಲಿ ಕೋಳಿಯ ಪಾತ್ರವಿಲ್ಲ' ಎಂಬುದು ತಿಳಿದುಬಂದಿದೆ ಎಂದು ಉಲ್ಲೇಖಿಸಿದ್ದಾರೆ.

ಜಾನುವಾರು ಉತ್ಪನ್ನ ಬಳಕೆಯ ವಿಷಯದಲ್ಲಿ 2019ರ ನೊವೆಲ್​ ಕೊರೊನಾ ವೈರಸ್ (2019 ಎನ್‌ಸಿಒವಿ) ಕುರಿತು ಸ್ಪಷ್ಟನೆ ಕೋರಿ ಸರ್ದಾನಾ ಅವರು ಕಳುಹಿಸಿದ ಇಮೇಲ್‌ಗೆ ಪ್ರತಿಕ್ರಿಯಿಸಿದ ಮಲಿಕ್, 'ಈ ಸಂದರ್ಭದಲ್ಲಿ, 2019 ಎನ್‌ಸಿಒವಿ ಹಬ್ಬುವ ಪ್ರಮುಖ ಮಾರ್ಗಗಳನ್ನು ಸ್ಪಷ್ಟಪಡಿಸುವುದು ಜಾಗತಿಕ ಪ್ರಾಣಿಗಳ ಆರೋಗ್ಯ ಸಂಸ್ಥೆ (ಒಐಇ). ಇದರ ಪ್ರಕಾರ 2019ರ ಎನ್‌ಸಿಒವಿ ಪ್ರಾಣಿ ಮೂಲವನ್ನು ಹೊಂದಿಲ್ಲದಿರಬಹುದು. ಆದರೆ, ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಿದೆ' ಎಂದಿದೆ ಎಂದು ತಿಳಿಸಿದ್ದಾರೆ.

ಜಾಗತಿಕವಾಗಿ ಕೋಳಿಗಳಿಂದ 2019 ಎನ್​ಸಿಒವಿ ಹಬ್ಬುತದೆ ಎಂಬುದು ವರದಿಯಾಗಿಲ್ಲ. ಹೀಗಾಗಿ, 2019 ಎನ್​ಸಿಒವಿಯ ಪ್ರಸ್ತುತದ ತಿಳಿವಳಿಕೆಯ ಮೇಲೆ ಕೋಳಿ ಮತ್ತು ಕೋಳಿ ಸಂಬಂಧಿತ ಉತ್ಪನ್ನಗಳ ಬಳಕೆ ಸುರಕ್ಷಿತವೆಂದು ಪರಿಗಣಿಸಬಹುದು. ಆದರೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಥವಾ ಒಐಇ ಸಲಹೆಗಳ ಪ್ರಕಾರ ನೈರ್ಮಲ್ಯದಂತಹ ಸಾಮಾನ್ಯ ತತ್ವಗಳನ್ನು ಪಾಲಿಸಬೇಕು ಎಂದು ಮಲಿಕ್ ಹೇಳಿದ್ದಾರೆ.

ABOUT THE AUTHOR

...view details