ಕರ್ನಾಟಕ

karnataka

ETV Bharat / business

ಶೇ 6.6ರಷ್ಟು ಜಿಗಿದ ಬ್ಯಾಂಕ್ ಸಾಲ ನೀಡಿಕೆ ಪ್ರಮಾಣ: ಹರಿದು ಬಂದ ಠೇವಣಿ ಎಷ್ಟು ಗೊತ್ತೇ? - ಭಾರತೀಯ ಬ್ಯಾಂಕ್​ಗಳ ಠೇವಣಿ

ಭಾರತೀಯ ಬ್ಯಾಂಕ್​ಗಳ ಸಾಲ ನೀಡಿಕೆ ಎರಡು ವಾರಗಳಲ್ಲಿ ಫೆಬ್ರವರಿ 26ಕ್ಕೆ ಶೇ 6.6ರಷ್ಟು ಏರಿಕೆಯಾಗಿದೆ. ಠೇವಣಿ ಕೂಡ ಶೇ 12.1ರಷ್ಟು ಹೆಚ್ಚಳ ಕಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ದತ್ತಾಂಶಗಳ ಮೂಲಕ ತಿಳಿಸಿದೆ.

banks loan
banks loan

By

Published : Mar 13, 2021, 2:03 PM IST

ನವದೆಹಲಿ:ಕೋವಿಡ್​ ಪ್ರೇರೇಪಿತದಿಂದ ಕುಸಿದು ವೇಗವಾಗಿ ಚೇತರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆಯ ಅಗತ್ಯಗಳನ್ನು ಪೂರೈಸಲು, ಉದ್ಯಮ ವಲಯಕ್ಕೆ ಸಾಲ ವಿತರಣೆಯು ಕಳೆದ ಎರಡು ವಾರಗಳಲ್ಲಿ ಏರಿಕೆಯಾಗಿದೆ.

ಭಾರತೀಯ ಬ್ಯಾಂಕ್​ಗಳ ಸಾಲಗಳು ಎರಡು ವಾರಗಳಲ್ಲಿ ಫೆಬ್ರವರಿ 26ಕ್ಕೆ ಶೇ 6.6ರಷ್ಟು ಏರಿಕೆಯಾಗಿದೆ. ಠೇವಣಿ ಕೂಡ ಶೇ 12.1ರಷ್ಟು ಹೆಚ್ಚಳ ಕಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ದತ್ತಾಂಶಗಳ ಮೂಲಕ ತಿಳಿಸಿದೆ.

ಬಾಕಿ ಇರುವ ಸಾಲದ ಪ್ರಮಾಣ ಇದೇ ಅವಧಿಯಲ್ಲಿ 712.73 ಬಿಲಿಯನ್ ರೂಪಾಯಿ (9.79 ಬಿಲಿಯನ್ ಡಾಲರ್​) ಏರಿಕೆಯಾಗಿ 107.75 ಟ್ರಿಲಿಯನ್ ರೂ.ಗೆ ತಲುಪಿದೆ.

ಇದನ್ನೂ ಓದಿ: ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದ್ರೆ 'ಅಶಿಸ್ತಿನ ಪ್ರಯಾಣಿಕ' ಬಹುಮಾನ!

ಆಹಾರೇತರ ಸಾಲ 713.55 ಬಿಲಿಯನ್ ರೂ.ಗಳಿಂದ 107 ಟ್ರಿಲಿಯನ್ ರೂ.ಗೆ ಹೆಚ್ಚಳವಾದರೇ ಆಹಾರ ಸಾಲ 810 ಮಿಲಿಯನ್ ರೂ. ಇಳಿದು 752.06 ಬಿಲಿಯನ್ ರೂ.ಗೆ ತಲುಪಿದೆ. ಬ್ಯಾಂಕ್ ಠೇವಣಿ 1.52 ಟ್ರಿಲಿಯನ್ ರೂ. ಏರಿಕೆ ಕಂಡು 149.34 ಟ್ರಿಲಿಯನ್ ರೂ.ಗಳಷ್ಟಾಗಿದೆ.

ABOUT THE AUTHOR

...view details