ಮುಂಬೈ :ದೇಶದ ಪ್ರಮುಖ ಆಟೋ ಮೊಬೈಲ್ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಬ್ ತನ್ನ ನಾಗ್ಪುರ ಘಟಕದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭಿಸಿದೆ. ಗ್ರಾಹಕರಿಗೆ ಅನುಕೂಲಕರ ಬುಕ್ಕಿಂಗ್ ಅನುಭವವನ್ನು ನೀಡುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಪ್ರತ್ಯೇಕವಾಗಿ www.chetak.comನಲ್ಲಿ 2,000 ರೂ. ನೀಡಿ ಎಲೆಕ್ಟ್ರಿಕ್ ಸ್ಕೂಟರ್ ಕಾಯ್ದಿರಿಸಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೊದಲು, ಪುಣೆ ಮತ್ತು ಬೆಂಗಳೂರಿಗೆ ಬುಕ್ಕಿಂಗ್ ಆರಂಭಿಸಲಾಗಿತ್ತು. 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬುಕ್ಕಿಂಗ್ ಮೂಲಕ ಸಂಪೂರ್ಣವಾಗಿ ಚಂದಾದಾರರಾಗಬಹುದಾಗಿದೆ. ನಾಗ್ಪುರದಲ್ಲಿಯೂ ಸಹ ಇದನ್ನು ನಿರೀಕ್ಷಿಸಲಾಗಿದೆ ಎಂದು ಬಜಾಬ್ ಹೇಳಿದೆ.
ಬೆಂಗಳೂರು ಮತ್ತು ಪುಣೆಯಲ್ಲಿ ನಮಗೆ ಉತ್ತಮ ಸ್ಪಂದನೆ ವ್ಯಕ್ತವಾದ ನಂತರ, ನಾಗ್ಪುರದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಸಂತೋಷವಾಗುತ್ತಿದೆ. ಶೀಘ್ರದಲ್ಲೇ ಇತರೆ ನಗರಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಬಜಾಜ್ ಆಟೋ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮತ್ತೆ ಶುರು.. ಕಾಯ್ದಿರಿಸುವ ವಿಧಾನ ಹೀಗಿದೆ
ನಾಗ್ಪುರ ಗ್ರಾಹಕರಿಂದ ಕಂಪನಿಯು ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ. ಬುಕ್ಕಿಂಗ್ ಬಳಿಕ ಜುಲೈ ಅಂತ್ಯದ ವೇಳೆಗೆ ಸ್ಕೂಟರ್ ಸಿಗಲಿದೆ. ಚೇತಕ್ ಇವಿ ಪ್ರೀಮಿಯಂ ಮತ್ತು ಅರ್ಬನ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ನಾಗ್ಪುರದ ಡೀಲರ್‌ಗಳ ಬಳಿ ಚೇತಕ್ ಲಭ್ಯವಾಗಲಿದ್ದು, ಎಕ್ಸ್ ಷೋರೂಂ ಬೆಲೆ 1,42,998 ರೂ.ಗಳಿಂದ ಪ್ರಾರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.