ನವದೆಹಲಿ: ಭಾರ್ತಿ ಏರ್ಟೆಲ್, ಜಿಯೋ ಇನ್ಫೋಕಾಮ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಏರ್‌ಟೆಲ್‌ನ 800 ಮೆಗಾಹರ್ಟ್ಜ್ ತರಂಗಾಂತರದಲ್ಲಿರುವ ಆಂಧ್ರ ಪ್ರದೇಶದ 3.75 ಮೆಗಾಹರ್ಟ್ಜ್, ದೆಹಲಿಯ 1.25, ಮುಂಬೈನ 2.50 ಮೆಗಾಹರ್ಟ್ಜ್ನ ತರಂಗಾಂತರದ ಬಳಕೆಯ ಹಕ್ಕನ್ನು ವರ್ಗಾಯಿಸಲಾಗಿದೆ ಎಂದು ಒಪ್ಪಂದ ಪತ್ರದಲ್ಲಿ ತಿಳಿಸಿದೆ.
ಈ ಒಪ್ಪಂದವು ಶಾಸನಬದ್ಧ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಏರ್ಟೆಲ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಈ ಮೂಲಕ ಒಟ್ಟು 7.50 ಮೆಗಾಹರ್ಟ್ಜ್ ತರಂಗಾಂತರದ ವರ್ಗಾವಣೆಯಾಗಿದ್ದು, ಜಿಯೋದಿಂದ 1,037.6 ಕೋಟಿ ರೂಪಾಯಿ ಪಡೆದುಕೊಂಡಿದೆ.
ಇದನ್ನೂ ಓದಿ:ಲಾಕ್ಡೌನ್ ಭೀತಿ: ಮತ್ತೆ ಆರ್ಥಿಕ ಹಿಂಜರಿಕೆಯ ಎಚ್ಚರಿಕೆ ನೀಡಿದ ಅಮೆರಿಕ
ಮುಂಬೈ, ಆಂಧ್ರ, ದೆಹಲಿಯಲ್ಲಿ ಬಳಕೆಯಾಗದ ತರಂಗಾಂತರವನ್ನು ನಾವು ಜಿಯೋಗೆ ನೀಡಿದ್ದು, ಈ ಮೂಲಕ ತರಂಗಾಂತರ ಮೌಲ್ಯ ಹೆಚ್ಚಾಗಲು ಸಹಕಾರಿಯಾಗಿದೆ. ಇವುಗಳ ಬಳಕೆಗೆ ಬೇರೆಯವರಿಗೆ ಅನುವು ಮಾಡಿಕೊಟ್ಟಿರುವುದರಿಂದ ನಮ್ಮ ಕಾರ್ಯತಂತ್ರಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂದು ಭಾರ್ತಿ ಏರ್‌ಟೆಲ್‌ನ ಎಂಡಿ ಮತ್ತು ಸಿಇಒ (ಭಾರತ ಮತ್ತು ದಕ್ಷಿಣ ಏಷ್ಯಾ) ಗೋಪಾಲ್ ವಿಟ್ಟಲ್ ಸ್ಪಷ್ಟನೆ ನೀಡಿದ್ದಾರೆ.
ಈಗ ಜಿಯೋದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಟೆಲಿಕಮ್ಯುನಿಕೇಷನ್ ಇಲಾಖೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಇದೆ ಎಂದು ಏರ್ಟೆಲ್ ಹೇಳಿದೆ.