ಕರ್ನಾಟಕ

karnataka

ETV Bharat / business

Fuel price: ದೇಶದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ; ಬೆಂಗಳೂರಿನಲ್ಲಿ ದರ ಸ್ಥಿರ - ಬೆಂಗಳೂರಿನಲ್ಲಿ ಡೀಸೆಲ್ ಬೆಲೆ

ಒಂದು ದಿನ ಸ್ಥಿರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂಧನ ಬೆಲೆ ಸ್ಥಿರವಾಗಿದೆ.

After remaining steady for a day, fuel prices increase again.
ಮತ್ತೆ ಇಂಧನ ಬೆಲೆ ಏರಿಕೆ: ಬೆಂಗಳೂರಿನಲ್ಲಿ ದರ ಸ್ಥಿರ

By

Published : Jun 20, 2021, 9:49 AM IST

ನವದೆಹಲಿ: ದೇಶದಲ್ಲಿ ಇಂಧನ ಬೆಲೆಗಳಲ್ಲಿ ದಿನದಿಂದ ದಿನಕ್ಕೆ ಏರುಪೇರು ಕಂಡು ಬರುವುದು ಸಾಮಾನ್ಯವಾಗಿದೆ. ಒಂದು ದಿನ ಸ್ವಲ್ಪ ಮಟ್ಟಿಗೆ ಸ್ಥಿರವಾಗಿದ್ದ ಇಂಧನ ಬೆಲೆ ಈಗ ಮತ್ತೆ ಏರಿಕೆ ಕಂಡಿದೆ. ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ 97.22 ರೂಪಾಯಿ, ಡೀಸೆಲ್ ಬೆಲೆ 87.97 ರೂಪಾಯಿ ಇದೆ. ದೇಶದ ವಾಣಿಜ್ಯ ರಾಜಧಾನಿ ನಗರಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕ್ರಮವಾಗಿ 103.36 ರೂಪಾಯಿ, 95.44 ರೂಪಾಯಿಯಷ್ಟಿದೆ.

ಇದನ್ನೂ ಓದಿ:Travel Update: ವಿಮಾನಸೇವೆಗಳ ನಿಯಮ ಸಡಿಲಿಸಿದ ದುಬೈ: ಭಾರತೀಯ ಪ್ರಯಾಣಿಕರಿಗೆ ಸಮಸ್ಯೆ?

ಬಿಹಾರದ ಪಾಟ್ನಾ ಮತ್ತು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ 99.28 ರೂಪಾಯಿ ಮತ್ತು 105.43 ರೂಪಾಯಿಯಿದ್ದರೆ, ಡೀಸೆಲ್ ಬೆಲೆ ಕ್ರಮವಾಗಿ 93.30 ರೂಪಾಯಿ ಮತ್ತು 96.65 ರೂಪಾಯಿಯಷ್ಟಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ..

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಮೂರು ದಿನಗಳಿಂದ ಸ್ಥಿರವಾಗಿದ್ದು, ಇಂದು ಕೂಡಾ ಒಂದು ಲೀಟರ್​ಗೆ​ 99.99 ರೂಪಾಯಿಯಷ್ಟಿದೆ. ಡೀಸೆಲ್ ಬೆಲೆ 92.97 ರೂಪಾಯಿಯಷ್ಟಿದೆ. ಜೂನ್ 18ರಂದು ಪೆಟ್ರೋಲ್ ಬೆಲೆ ಸೆಂಚುರಿ ಬಾರಿಸಿದ್ದು, ಪ್ರತಿ ಲೀಟರ್‌ಗೆ 100.25 ರೂಪಾಯಿ‌ ಆಗಿತ್ತು.

ABOUT THE AUTHOR

...view details