ಕರ್ನಾಟಕ

karnataka

ETV Bharat / business

ಪೆನ್ಷನ್​ದಾರರಿಗೆ ಗುಡ್​ ನ್ಯೂಸ್​: ಇನ್ಮುಂದೆ ಇ - ಕೆವೈಸಿ ಜತೆ ಪಿಂಚಣಿ ಖಾತೆ ತೆರೆಯಬಹುದು.. ಹೇಗೆ ಗೊತ್ತೇ? - ಆನ್​ಲೈನ್​ ರಾಷ್ಟ್ರೀಯ ಪಿಂಚಣಿ ಯೋಜನೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಪಿಎಫ್‌ಆರ್‌ಡಿಎಯ ಎರಡು ಪ್ರಮುಖ ಯೋಜನೆಗಳಾಗಿವೆ. ಸಂಘಟಿತ ವಲಯದ ಉದ್ಯೋಗಿಗಳಿಗೆ ಎನ್‌ಪಿಎಸ್ ಪೂರೈಸುತ್ತದೆ. ಎಪಿವೈ ಮುಖ್ಯವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರ ಪಿಂಚಣಿ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ.

NPS account
NPS account

By

Published : Feb 3, 2021, 5:30 PM IST

ನವದೆಹಲಿ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಹೊಸ ಚಂದಾದಾರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ ಆನ್‌ಲೈನ್ ಆಧಾರ್ ಇ-ಕೆವೈಸಿ ಪ್ರಕ್ರಿಯೆ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಪಿಎಫ್‌ಆರ್‌ಡಿಎಯ ಎರಡು ಪ್ರಮುಖ ಯೋಜನೆಗಳಾಗಿವೆ. ಸಂಘಟಿತ ವಲಯದ ಉದ್ಯೋಗಿಗಳಿಗೆ ಎನ್‌ಪಿಎಸ್ ಪೂರೈಸುತ್ತದೆ. ಎಪಿವೈ ಮುಖ್ಯವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರ ಪಿಂಚಣಿ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ.

ಆನ್‌ಲೈನ್ ಕೆವೈಸಿ ನಿರ್ವಹಿಸಲು ಕಂದಾಯ ಇಲಾಖೆಯ ಇತ್ತೀಚಿನ ಅನುಮೋದನೆಯು ಖಾತೆ ತೆರೆಯುವ ಪ್ರಕ್ರಿಯೆಗೆ ಮತ್ತಷ್ಟು ಅನುಕೂಲವಾಗಲಿದೆ. ಈ ಪ್ರಕ್ರಿಯೆಯು ಎನ್‌ಪಿಎಸ್ ಚಂದಾದಾರರಿಗೆ ಸುಲಭವಾದ ಡಿಜಿಟಲ್ ಪ್ರವೇಶ ಒದಗಿಸುತ್ತದೆ ಎಂದು ಎಂದು ಪಿಎಫ್‌ಆರ್‌ಡಿಎ ತಿಳಿಸಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಆಧಾರ್ ಮೂಲದ ಆಫ್‌ಲೈನ್ ಪೇಪರ್‌ಲೆಸ್ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪಿಂಚಣಿ ಯೋಜನೆಯಡಿ ಹೊಸ ಚಂದಾದಾರರಿಗೆ ಅವಕಾಶ ನೀಡಿತು. ಕೆವೈಸಿ ಪರಿಶೀಲನೆಯ ನಂತರ ಎನ್‌ಪಿಎಸ್ ಖಾತೆಗಳನ್ನು ತೆರೆಯಲು ಇದು ಉಪಯುಕ್ತವಾಗಿದೆ.

ಇದನ್ನೂ ಓದಿ: ಇಂದಿನಿಂದ ಕೇಂದ್ರೀಯ ವಿತ್ತೀಯ ನೀತಿ ಸಮಿತಿ ಸಭೆ ಆರಂಭ: ಫೆ.5ಕ್ಕೆ ಬಡ್ಡಿ ದರ ಘೋಷಣೆ

ಸರ್ಕಾರಿ ನೌಕರರಿಗೆ ಆನ್‌ಲೈನ್ ನೋಂದಣಿಗೆ ಅನುಕೂಲವಾಗುವಂತೆ ರಿಮೋಟ್ ಆನ್‌ಬೋರ್ಡಿಂಗ್, ಆನ್‌ಲೈನ್ ನಿರ್ಗಮನ ಪರಿಕರಗಳು, ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಆಧಾರಿತ ದೃಢೀಕರಣ, ಪೇಪರ್‌ಲೆಸ್ ಆನ್‌ಬೋರ್ಡಿಂಗ್, ಇ-ಸೈನ್ ಆಧಾರಿತ ದೃಢೀಕರಣ, ಡಿ-ರಿಮೋಟ್, ವಿಡಿಯೋ ಗ್ರಾಹಕರ ಗುರುತಿಸುವಿಕೆ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ.

ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗಳಲ್ಲಿ ಒಂದಾದ ಎನ್‌ಎಸ್‌ಡಿಎಲ್ ಇ-ಗವರ್ನೆನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಅಟಲ್ ಪಿಂಚಣಿ ಯೋಜನೆಗಾಗಿ ಜಾಗತಿಕ ಆಧಾರ್ ಬಳಕೆದಾರ ಏಜೆನ್ಸಿಯಾಗಿ ಕಾರ್ಯನಿರ್ವಹಿಸುವಂತೆ ಎನ್‌ಪಿಎಸ್‌ಗೆ ನಿರ್ದೇಶನ ನೀಡಿದೆ.

ABOUT THE AUTHOR

...view details