ಕರ್ನಾಟಕ

karnataka

ETV Bharat / briefs

ವಿಶ್ವಕಪ್​ ಮಹಾಸಮರ 2019... ಬಲಿಷ್ಠ ಇಂಗ್ಲೆಂಡ್​ಗೆ ಸವಾಲ್​ ಹಾಕುತ್ತಾ  ದಕ್ಷಿಣ ಆಫ್ರಿಕಾ

ವಿಶ್ವಕಪ್​ ಮರೀಚಿಕೆಯಾಗಿರುವ ಇಂಗ್ಲೆಂಡ್​ ಹಾಗೂ ದಕ್ಷಿಣ ಅಫ್ರಿಕಾ ತಂಡಗಳು ಇಂದು ನಡೆಯಲಿರುವ 12ನೇ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

sa vs eng

By

Published : May 29, 2019, 11:40 PM IST

ಲಂಡನ್​: ಮೂರು ಬಾರಿ ಫೈನಲ್​ ತಲುಪಿದರೂ ಒಮ್ಮೆಯೂ ಚಾಂಪಿಯನ್​ ಆಗದ ಇಂಗ್ಲೆಂಡ್​, ಮತ್ತೊಂದು ಕಡೆ ಪೈನಲ್​ಗೆ ಎಂಟ್ರಿಕೊಡಲಾಗದೇ ಚೋಕರ್ಸ್​ ಹಣೆಪಟ್ಟಿ ಕಟ್ಟುಕೊಂಡಿರುವ ದ. ಆಫ್ರಿಕಾ ತಂಡ ಇಂದು ನಡೆಯಲಿರುವ 12ನೇ ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಕ್ರಿಕೆಟ್​ ಜನಕರೆಂದು ಕರೆಸಿಕೊಳ್ಳುವ ಇಂಗ್ಲೆಂಡ್​ 44 ವರ್ಷಗಳಿಂದ ವಿಶ್ವಕಪ್​ನಲ್ಲಿ ಪಾಲ್ಗೊಳ್ಳುತ್ತಿದ್ದು, ಮೂರು ಬಾರಿ ಫೈನಲ್​ ತಲುಪಿದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ನಿರಾಸೆಯನುಭವಿಸಿದೆ. 1979ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ, 1987ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 1992ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿ ನಿರಾಸೆಯನುಭವಿಸಿದೆ.

ಆದರೆ, ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ತವರಿನ ಲಾಭ ಪಡೆದು ಇಂಗ್ಲೆಂಡ್​​ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾಗಿ ನಾಳಿನ ಪಂದ್ಯದಲ್ಲೂ ಗೆಲ್ಲುವ ಫೇವ್​ರಿಟ್​ ಎನಿಸಿಕೊಂಡಿದೆ.

ಬೈರ್​ಸ್ಟೋವ್​ , ಜೋರೂಟ್​, ಜಾಸನ್​ ರಾಯ್​ ಹಾಗೂ ಮಾರ್ಗನ್​ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಇದರ ಜೊತೆಗೆ ಆರ್ಚರ್​, ಪ್ಲಂಕೇಟ್​, ರಶೀದ್​, ಮಾರ್ಕ್​ವುಡ್​ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೆನ್​ ಸ್ಟೋಕ್ಸ್​ ಹಾಗೂ ಮೊಯಿನ್​ ಅಲಿ ಆಲ್​ರೌಂಡರ್​​​ ಬಲ ಕೂಡ ಇದ್ದೇ ಇದೆ.

ಇನ್ನು ದ.ಆಫ್ರಿಕಾ ತಂಡದ ವಿಶ್ವಕಪ್​ ಇತಿಹಾಸ ನೋಡುವುದಾದರೆ ನಾಲ್ಕು ಬಾರಿ ಸೆಮಿಫೈನಲ್​ ತಲುಪಿದ್ದು ಒಮ್ಮೆಯೂ ಫೈನಲ್​ ತಲುಪಿಲ್ಲ. 1992ರಲ್ಲಿ ಮೊದಲ ವಿಶ್ವಕಪ್​ ಆಡಿದ್ದ ದ.ಆಫ್ರಿಕಾ ತಂಡ ಸೆಮಿಫೈನಲ್​ ತಲುಪಿತ್ತು. ನಂತರ 1999, 2007 ಹಾಗೂ 2015ರಲ್ಲಿ ಸೆಮಿಫೈನಲ್​ ತಲುಪಿರುವುದೇ ಅದರ ಸಾಧನೆಯಾಗಿದೆ. ಆದ್ದರಿಂದಲೇ ದ.ಆಫ್ರಿಕಾವನ್ನು ಚೋಕರ್ಸ್​ ಎಂದು ಕರೆಯಲಾಗುತ್ತಿದೆ.

ಈ ಬಾರಿ ಫಾಫ್​ ಡು ಪ್ಲೆಸಿಸ್​ ನಾಯಕತ್ವದಲ್ಲಿ ಹರಿಣ ಪಡೆ ವಿಶ್ವಕಪ್​ಗೆ ಸಿದ್ದವಾಗಿದ್ದು, ಡಿಕಾಕ್​, ಮಾರ್ಕ್ರಮ್​ , ಡಾಸ್ಸೆನ್​ರಂತಹ ಯುವ ಆಟಗಾರರು ಅರಂಭಿಕ ಸ್ಥಾನ ತುಂಬಲಿದ್ದರೆ, ನಾಯಕ ಪ್ಲೆಸಿಸ್​, ಡುಮಿನಿ, ಮಿಲ್ಲರ್​ ಮಧ್ಯಮ ಕ್ರಮಾಂಕದಲ್ಲಿ ಬಲ ನೀಡಲಿದ್ದಾರೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ರಬಾಡಾ, ಪೆಹ್ಲುಕ್ವಾಯೋ, ಲುಂಗಿ ಎಂಗಿಡಿಯಂತಹ ಯುವ ಬೌಲರ್​​ಗಳ ಜೊತೆಗೆ ತಾಹೀರ್​,ಮೋರಿಸ್​ ರಂತಹ ಹಿರಿಯರ ಬಲದಿಂದ ಇಂಗ್ಲೆಂಡ್​ ಪೈಪೋಟಿ ನೀಡಲು ಸನ್ನದ್ಧ ವಾಗಿದೆ.

59 ಪಂದ್ಯಗಳಲ್ಲಿ ಇಂಗ್ಲೆಂಡ್​ 26 ಗೆಲುವು ಹಾಗೂ ದ.ಆಫ್ರಿಕಾ 29 ರಲ್ಲಿಗೆಲುವು ಸಾಧಿಸಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

ವಿಶ್ವಕಪ್​ನಲ್ಲಿ ಮುಖಾಮುಖಿ

ವಿಶ್ವಕಪ್​ನಲ್ಲಿ ಎರಡು ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು ತಲಾ 3ರಲ್ಲಿ ಜಯ ಸಾಧಿಸಿವೆ.

ತಂಡಗಳ ವಿವಿರ:

ಇಂಗ್ಲೆಂಡ್​ ತಂಡ:

ಜಾನಿ ಬೈರ್ಸ್ಟೋವ್, ಇಯಾನ್​ ಮಾರ್ಗನ್​(ನಾಯಕ),ಜೋ ರೂಟ್​, ಜಾಸನ್​ ರಾಯ್​, ಇಯಾನ್​ ಮಾರ್ಗನ್, ಜೋಫ್ರಾ ಆರ್ಚರ್, ಬೆನ್​ ಸ್ಟೋಕ್ಸ್​, ಜಾಸ್​ ಬಟ್ಲರ್​, ಲೈಮ್ ಫ್ಲಂಕೇಟ್​, ಮೊಯಿನ್​ ಅಲಿ, ಆದಿಲ್​ ರಶೀದ್​, ಕ್ರಿಸ್​ ವೋಕ್ಸ್​, ಟಾಮ್​ ಕರ್ರನ್​, ಮಾರ್ಕ್​ ವುಡ್​, ಲೈಮ್​ ಡಾಸನ್,ಜೇಮ್ಸ್​ ವಿನ್ಸ್​ ​

ದಕ್ಷಿಣ ಆಫ್ರಿಕಾ

ಕ್ವಿಂಟನ್​ ಡಿಕಾಕ್​, ಹಾಸಿಂ ಆಮ್ಲ, ಫಾಫ್​ ಡು ಪ್ಲೆಸಿಸ್​ (ನಾಯಕ) ರಾಸ್ಸಿ ವ್ಯಾನ್​ ಡರ್​ ಡಾಸ್ಸೆನ್, ಜೀನ್​ ಪಾಲ್​ ಡುಮಿನಿ, ಡೇವಿಡ್​ ಮಿಲ್ಲರ್​​, ಆ್ಯಂಡಿಲೇ ಪೆಹ್ಲುಕ್ವಾಯೋ, ಡ್ವೈನ್​ ಪ್ರೆಟೋರಿಯಸ್​, ಕಗಿಸೋ ರಬಡಾ, ಲುಂಗಿ ಎಂಗಿಡಿ, ಇಮ್ರಾನ್​ ತಾಹೀರ, ತಬ್ರೈಜ್​ ಶಂಸಿ, ಕ್ರಿಸ್​ ಮೋರಿಸ್​

ABOUT THE AUTHOR

...view details