ಮಾಸ್ಕೋ(ರಷ್ಯಾ): ಉಡಾವಣೆಗೊಂಡ ಕೇವಲ ಹತ್ತು ಸೆಕೆಂಡ್ಗೆ ರಾಕೆಟ್ಗೆ ಮಿಂಚು ಹೊಡೆದಿರುವ ಘಟನೆ ಉತ್ತರ ರಷ್ಯಾದ ಮಿರ್ನಿ ಪ್ರದೇಶದಲ್ಲಿ ನಡೆದಿದೆ.
ಮೇ 27ರಂದು ಉತ್ತರ ರಷ್ಯಾದ ಮಿರ್ನಿ ಬಳಿಯ ಪ್ಲೆಸೆಕ್ಸ್ಟ್ ಕಾಸ್ಮೋಡ್ರೋಮ್ ಉಡ್ಡಯನ ಕೇಂದ್ರದಿಂದ ರಾಸ್ಕೋಸ್ಮೋಸ್ ಸೂಯಜ್ 2-1ಬಿ ಎನ್ನುವ ರಾಕೆಟ್ ಅನ್ನು ಸಂಜೆ 6.23ರ ಸಮಯದಲ್ಲಿ ಉಡಾವಣೆ ಮಾಡಲಾಗಿತ್ತು.
ಉಡಾವಣೆಗೊಂಡ ಹತ್ತೇ ಸೆಕೆಂಡ್ನಲ್ಲಿ ಬಲವಾದ ಮಿಂಚು ರಾಕೆಟ್ಗೆ ಬಡಿದಿದೆ. ಅಚ್ಚರಿಯೆಂದರೆ ಪ್ರಬಲವಾದ ಮಿಂಚಿಗೂ ಜಗ್ಗದೆ ರಾಕೆಟ್ ನಭದತ್ತ ಜಿಗಿದಿದೆ.
ಸದ್ಯ ಈ ವಿಡಿಯೋವನ್ನು ಉಡಾವಣಾ ಕೇಂದ್ರದ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಂಚಿನ ಹೊಡೆತವನ್ನು ಮೀರಿ ರಾಕೆಟ್ ಅನ್ನು ಕಕ್ಷೆಗೆ ಸೇರಿಸಿದ ನಿಮ್ಮ ಕಾರ್ಯ ಶ್ಲಾಘನೀಯ ಎಂದು ಬರೆದುಕೊಂಡಿದ್ದಾರೆ.