ಬಾಗಲಕೋಟೆ: ಯಾರು ಏನೇ ವಿರೋಧ ಮಾಡಿದರೂ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಸ್ಪಷ್ಟಪಡಿಸಿದ್ದಾರೆ. ಕಳೆದ ದಿನ ಮಾಜಿ ಸಚಿವ ಹೆಚ್ ವೈ ಮೇಟಿ ಅವರು ತೆರವುಗೊಳಿಸುವ ಕಾರ್ಯಕ್ಕೆ ವಿರೋಧ ಮಾಡಿರುವ ಹಿನ್ನೆಲೆ ಈ ಸ್ಪಷ್ಟನೆ ನೀಡಿದ್ದಾರೆ.
ನಗರ ಸೌಂದರ್ಯಗೊಳಿಸುವುದು ಹಾಗೂ ಸ್ಲಮ್ ಮುಕ್ತಗೊಳಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೋರಾಟ ಮಾಡುವವರು ಮಾಡಲಿ, ನಾವು ಹೋರಾಟ ಮಾಡಿಯೇ ಬಂದಿದ್ದೇವೆ. ನಮ್ಮ ಆದ್ಯತೆ ಮೊದಲು ಅಭಿವೃದ್ಧಿಗೆ ಎಂದಿದ್ದಾರೆ.